ಆತ್ಮಹತ್ಯೆ ತಡೆ ಜಾಗೃತಿಗೆ ಫೋನ್​ಇನ್​

10dvk 2
Published on

ಬೆಳಗಾವಿ: ಕೆಎಲ್​ಇ ವೇಣುಧ್ವನಿ 90.4 ಎಫ್​.ಎಂ. ಹಾಗೂ ಕೆಎಲ್​ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಕೆಎಲ್​ಇ ಜವಾಹರಲಾಲ್​ ನೆಹರೂ ವೈದ್ಯಕಿಯ ಮಹಾವಿದ್ಯಾಲಯದ ಸಹಯೋಗದಲ್ಲಿ ವಿಶ್ವ ಆತ್ಮಹತ್ಯೆ ತಡೆ ದಿನದ ಪ್ರಯುಕ್ತ ಬುಧವಾರ ನೇರ ಫೋನ್​&ಇನ್​ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕೆಎಲ್​ಇ ಆಸ್ಪತ್ರೆಯ ಮನೋವೈದ್ಯ ಡಾ.ಭೀಮಸೇನ ಟೆಕ್ಕಳಕಿ ಕಾರ್ಯಕ್ರಮದಲ್ಲಿ ಮಾತನಾಡಿ, ಆತ್ಮಹತ್ಯೆ ಕಾರಣಗಳು, ಯಾವ ವಯೋಮಾನದವರಲ್ಲಿ ಹೆಚ್ಚು ಕಂಡುಬರುತ್ತದೆ, ಆತ್ಮಹತ್ಯೆ ಪ್ರವೃತ್ತಿ ಹೇಗೆ ನಿಯಂತ್ರಿಸಬಹುದು, ಸಾಮಾಜಿಕ ಜಾಲತಾಣ ಮತ್ತು ಆನ್​ಲೈನ್​ ಗೇಮ್​ಗಳಿಂದ ಯುವಜನತೆ ಖಿನ್ನತೆಗೆ ಒಳಗಾಗುತ್ತಿರುವ ಬಗೆ ಹಾಗೂ ಹೇಗೆ ಹೊರಬಹುದು ಎಂಬುದರ ಬಗ್ಗೆ ಜಾಗೃತಿ ಮೂಡಿಸಿದರು.

ಕೆಎಲ್​ಇ ಆಸ್ಪತ್ರೆ ಮನೋರೋಗ ವಿಭಾಗದಲ್ಲಿ ಲಭ್ಯವಿರುವ ಚಿಕಿತ್ಸೆ, ಸೌಲಭ್ಯ ಕುರಿತು ವಿವರಿಸಿ, ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಿದರು. ವೇಣುಧ್ವನಿ ಕಾರ್ಯಕ್ರಮ ನಿರ್ವಾಹಕಿ ಮನಿಷಾ ಪಿ. ಎಸ್​. ಮತ್ತು ಮಂಜುನಾಥ ಪೈ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net