

ಚಿತ್ರದುರ್ಗ: ಜಿಪಂ, ಬೆಳಗಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಜಿಲ್ಲಾ ರಾಷ್ಟ್ರೀಯ ಮಾನಸಿಕ ಅರೋಗ್ಯ ಕಾರ್ಯಕ್ರಮದಡಿ ಗ್ರಾಮದ ಮಾರುತಿ ಪ್ರೌಢಶಾಲೆಯಲ್ಲಿ ಬುಧವಾರ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನವನ್ನು ಆಚರಿಸಲಾಯಿತು. ಕಾರ‌್ಯಕ್ರಮ ಉದ್ಘಾಟಿಸಿದ ಆರೋಗ್ಯ ನಿರೀಕ್ಷಣಾಧಿಕಾರಿ ಡಿ.ಮಹೇಶ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಪ್ರಪಂಚದಾದ್ಯಂತ ಅಪಾಯಕಾರಿ ಮಟ್ಟದಲ್ಲಿ ಹೆಚ್ಚುತ್ತಿವೆ. ಆಧುನಿಕ ಜೀವನ ಒತ್ತಡ, ಮಾನಸಿಕ ಖಿನ್ನತೆ ಆತ್ಮಹತ್ಯೆಗೆ ಕಾರಣವಾಗಿದೆ. ಆದ್ದರಿಂದ ಆತ್ಮಸ್ಥೈರ್ಯದ ಗುಣ ಬೆಳೆಸಿಕೊಂಡಲ್ಲಿ ನೆಮ್ಮದಿ ಬದುಕು ನಡೆಸಬಹುದು ಎಂದರು. ಆರೋಗ್ಯ ಶುಶ್ರೂಷಕ ಅಧಿಕಾರಿ ರೂಪಾ ಮಾತನಾಡಿದರು. ಆರೋಗ್ಯ ನೀರಿಕ್ಷಣಾಧಿಕಾರಿ ನಾಗೇಶ್, ಸುರಕ್ಷತಾ ಅಧಿಕಾರಿ ಶುಭಶ್ರೀ, ಮುಖ್ಯಶಿಕ್ಷಕ ಮಂಜುನಾಥ, ಶಿಕ್ಷಕ ಶ್ರೀನಿವಾಸ್‌ರೆಡ್ಡಿ, ಮಹಾದೇವಿ ಇತರರಿದ್ದರು.