ಆತ್ಮಲಿಂಗಕ್ಕೆ ಅಂಕುರ ಸಮರ್ಪಣೆ

16gkn1
Published on

ಗೋಕರ್ಣ: ಮಹಾಶಿವರಾತ್ರಿ ಕೊನೆಯ ದಿನ ಸೋಮವಾರ ರಾತ್ರಿ ಆತ್ಮಲಿಂಗ ರೂಪಿ ಮಹಾಬಲೇಶ್ವರನಿಗೆ ಕ್ಷೇತ್ರ ಪರಂಪರೆಯಂತೆ ಅಂಕರ ಸಮರ್ಪಣೆ ನಡೆಯಿತು. ಮಹಾಶಿವರಾತ್ರಿಯ ಮೊದಲ ದಿನ ಯಾಗಶಾಲೆಯಲ್ಲಿ ಮಡಕೆಯಲ್ಲಿ ಮಣ್ಣು ತುಂಬಿ ಆಗಮೋಕ್ತ ವಿಧಿಯೊಂದಿಗೆ ವಿವಿಧ ಧಾನ್ಯಗಳನ್ನು ಅದರಲ್ಲಿ ಹೂಳಲಾಗುತ್ತದೆ. ಕೊನೆಯ ಒಂಬತ್ತನೆ ದಿನ ಹೀಗೆ ಧಾನ್ಯಗಳಿಂದ ಮೊಳಕೆಯೊಡೆದ ಅಂಕುರ (ಸಸಿ)ಗಳನ್ನು ಆತ್ಮಲಿಂಗಕ್ಕೆ ಅರ್ಪಿಸಿ ಅವುಗಳನ್ನು ಪ್ರಸಾದ ರೂಪದಲ್ಲಿ ಹಂಚಲಾಗುತ್ತದೆ. ಮಂದಿರ ಅರ್ಚಕ ವೇ. ಅಮೃತೇಶ ಹಿರೇ ನೇತೃತ್ವದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಉಪಸ್ಥಿತರಿದ್ದು ಅಂಕುರ ಸಮರ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net