

ಚಿಕ್ಕೋಡಿ: ಮಹಿಳೆಯರು ತುರ್ತು ಪರಿಸ್ಥಿತಿಗಳಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮಹಿಳಾ ಸೆಲ್ ಡಿಫೆನ್ಸ್ ತರಬೇತಿ ಪಡೆದುಕೊಳ್ಳಬೇಕೆಂದು ವಕೀಲ ಪ್ರಭಾಕರ ಶೇಡಬಾಳೆ ಹೇಳಿದರು.
ತಾಲೂಕಿನ ಚಿದಾನಂದ ಬಸಪ್ರಭು ಕೋರೆ ಬಹುತಾಂತ್ರಿಕ ಮಹಾವಿದ್ಯಾಲಯದಲ್ಲಿ ಶುಕ್ರವಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ವಿಭಾಗ ಮತ್ತು ಟೆಕ್ವೆಂಡೊ ಅಸೊಸೀಯೆಶನ್ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎರಡು ದಿನಗಳ ಮಹಿಳಾ ಸೆಲ್ ಡಿಫೆನ್ಸ್ ಕಾರ್ಯಾಗಾರದಲ್ಲಿ ಮಾತನಾಡಿ, ಮಹಿಳೆಯರು ಆತ್ಮರಕ್ಷಣೆ, ಸಿದ್ಧಾಂತ ಮತ್ತು ಪ್ರಾಯೋಗಿಕ ಭಾಗಗಳನ್ನು ಒಳಗೊಂಡ ತರಬೇತಿ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿನಿಯರು ಅಗತ್ಯ ತಂತ್ರಗಳನ್ನು ಕಲಿತುಕೊಳ್ಳಬೇಕು ಎಂದರು.
ದರ್ಶನಕುಮಾರ ಬಿಳ್ಳೂರ ಮಾತನಾಡಿ, ವಿದ್ಯಾರ್ಥಿನಿಯರು ಕಲಿತ ವಿಷಯವು ಕೇವಲ ಪಠ್ಯಗಳಿಗೆ ಸೀಮಿತಗೊಳಿಸಬಾರದು ಎಂದರು.
ಮಹಿಳಾ ವಿಭಾಗದ ಆಶ್ರಯದಲ್ಲಿ ವಿದ್ಯಾರ್ಥಿನಿಯರಿಗಾಗಿ ಮೆಹಂದಿ, ರಂಗೋಲಿ, ಕೇಶವಿನ್ಯಾಸನ ಮತ್ತು ವಧುವಿನ ಮೇಕಪ್ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ಪತ್ರ ಪ್ರದಾನ ಮಾಡಲಾಯಿತು.