

ಬೆಳಗಾವಿ: ಬೀದಿ ಬದಿ ವ್ಯಾಪಾರಿಗಳನ್ನು ಆರ್ಥಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿರುವ ಆತ್ಮನಿರ್ಭರ್ ಯೋಜನೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಅಭಯ ಪಾಟೀಲ ಹೇಳಿದರು.
ಬೆಳಗಾವಿಯ ಶಾಸಿ ನಗರದ ಪಾಟಿದಾರ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆತ್ಮನಿರ್ಭರ್ ಯೋಜನೆ ಅಡಿಯಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ 10 ಸಾವಿರ ರೂ. ಚೆಕ್ ವಿತರಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ವಿವಿಧ ಯೋಜನೆ ಸದುಪಯೋಗ ಪಡೆದುಕೊಂಡು ಬೀದಿ ಬದಿ ವ್ಯಾಪಾರಿಗಳು ಆರ್ಥಿಕವಾಗಿ ಅಭಿವೃದ್ಧಿಗೊಳ್ಳಬೇಕು ಎಂದರು.
ನಗರದಲ್ಲಿ 150 ವ್ಯಾಪಾರಿಗಳಿಗೆ ಚೆಕ್ ನೀಡುತ್ತಿದ್ದೇವೆ. 10 ಸಾವಿರ ರೂ. ಬಳಸಿಕೊಂಡು ಮರಳಿ ಪಾವತಿಸಿದರೆ 20 ಸಾವಿರ ರೂ.ಸಾಲ ನೀಡಲಾಗುತ್ತದೆ. 20 ಸಾವಿರ ರೂ.ತುಂಬಿದರೆ 50 ಸಾವಿರ ರೂ.ನೀಡಲಾಗುತ್ತದೆ. ನಮ್ಮ ದಣ ೇತ್ರದ ವ್ಯಾಪಾರಿಗಳು ಈ ಯೋಜನೆಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಮಹಾನಗರ ಪಾಲಿಕೆ ಆಯುಕ್ತ ಡಾ.ರುದ್ರೇಶ ಘಾಳಿ, ನಗರ ಸೇವಕರಾದ ಗಿರೀಶ ಧೋಂಗಡಿ, ನಿತಿನ್ ಜಾಧವ ಇತರರಿದ್ದರು.