ಆತ್ಮ ರಕ್ಷಣೆಗಾಗಿ ಕರಾಟೆ ಕಲಿಯಿರಿ

jyp karatey
ಜಯಪುರದಲ್ಲಿ ಕರಾಟೆ ಹಾಗೂ ಯೋಗ ಶಿಬಿರ ಆಯೋಜಿಸಲಾಗಿತ್ತು. ಸ್ಪಂದನ ಸಂಸ್ಥೆಯ ಕಿಬ್ಳಿ ಪ್ರಸನ್ನಕುಮಾರ್, ರೇವತಿ, ಕರುಣಾಕರ, ಎಸ್.ವಿಶ್ವನಾಥ್, ಮನೋಹರ್ ಇತರರಿದ್ದರು.
Published on

ಜಯಪುರ: ಹೆಣ್ಣು ಮಕ್ಕಳು ಆತ್ಮರಕ್ಷಣೆಗಾಗಿ ಕರಾಟೆ ಕಲಿಯುವ ಅಗತ್ಯವಿದ್ದು, ಜಯಪುರದ ಸ್ಪಂದನ ಸಂಸ್ಥೆ ಕರಾಟೆ ಉಚಿತ ಶಿಬಿರ ಆಯೋಜಿಸಿದೆ ಎಂದು ಸರ್ಕಾರಿ ಹಿರಿಯ ಪ್ರಾಥಮಿಲ ಶಾಲೆ ಮುಖ್ಯಶಿಕ್ಷಕಿ ರೇವತಿ ಹೇಳಿದರು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಪಂದನ ಸ್ವಯಂಸೇವಾ ಸಂಸ್ಥೆ, ಐಡಿಯಲ್ ಸ್ಫೋರ್ಟ್ಸ್ ಮಾರ್ಷಲ್ ಆರ್ಟ್ಸ್ ಕರಾಟೆ ಅಸೋಸಿಯೇಷನ್ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ನಡೆದ ಉಚಿತ ಕರಾಟೆ ಹಾಗೂ ಯೋಗ ಶಿಬಿರದಲ್ಲಿ ಮಾತನಾಡಿದರು.

ಜಗತ್ತಿನಲ್ಲಿ ಬದಲಾವಣೆಯಾದಂತೆ ಅಪರಾಧ ಕೃತ್ಯಗಳು ಹೆಚ್ಚುತ್ತಿವೆ. ಇಂಥ ಸಂದರ್ಭದಲ್ಲಿ ಮಹಿಳೆಯಾಗಲೀ ಪುರುಷರಾಗಲೀ ಆತ್ಮರಕ್ಷಣೆಗೆ ನಿರಾಯುಧರಾಗಿ ಹೋರಾಟ ನಡೆಸಬಹುದಾದ ಏಕೈಕ ಕಲೆ ಕರಾಟೆ. ಎಲ್ಲರೂ ಇದನ್ನು ಅಭ್ಯಾಸ ಮಾಡಿಕೊಳ್ಳಬೇಕು. ನಗರ ಪ್ರದೇಶಗಳಲ್ಲಿ ಸಾವಿರಾರು ರೂಪಾಯಿ ಶುಲ್ಕ ಪಾವತಿಸಿ ಕಲಿಯಬೇಕಿದ್ದ ಕರಾಟೆಯನ್ನು ಮೂರು ವರ್ಷಗಳಿಂದ ಉಚಿತವಾಗಿ ಗ್ರಾಮೀಣ ಭಾಗದ ಮಕ್ಕಳಿಗೆ ಕಲಿಸುತ್ತಿರುವ ಸ್ಪಂದನ ಸಂಸ್ಥೆಯ ಸಾಮಾಜಿಕ ಕಾರ್ಯ ಅಭಿನಂದನೀಯ ಎಂದು ಹೇಳಿದರು.

ಸ್ಪಂದನ ಸ್ವಯಂಸೇವಾ ಸಂಸ್ಥೆ ಹಾಗೂ ಐಡಿಯಲ್ ಸ್ಫೋರ್ಟ್ಸ್ ಮಾರ್ಷಲ್ ಆರ್ಟ್ಸ್ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಕಿಬ್ಳಿ ಪ್ರಸನ್ನಕುಮಾರ್ ಮಾತನಾಡಿ, ಈ ಹಿಂದೆ ಕರಾಟೆ ಕಲಿಯಲು ಅವಕಾಶ ಇರಲಿಲ್ಲ. ಆದ್ದರಿಂದ ನಮ್ಮ ಸಂಸ್ಥೆಯಿಂದ ಕರಾಟೆ ಕಲಿಕೆ ಉಚಿತ ಶಿಬಿರ ಆಯೋಜಿಸಿದ್ದೇವೆ. ವಿದ್ಯಾರ್ಥಿಗಳು ಕಲಿತ ಕರಾಟೆಯನ್ನು ಆತ್ಮರಕ್ಷಣೆಗೆ ಉಪಯೋಗಿಸಿಕೊಳ್ಳಬೇಕೆ ಹೊರತು ಬೇರೆಯವರಿಗೆ ತೊಂದರೆ ಕೊಡಬೇಡಿ ಎಂದು ಹೇಳಿದರು.

ಜಯಪುರ ಗ್ರಾಪಂ ಅಧ್ಯಕ್ಷ ಕರುಣಾಕರ, ಸ್ಪಂದನ ಸಂಸ್ಥೆ ಗೌರವಾಧ್ಯಕ್ಷ ಮಣಿಕಂಠನ್ ಕಂದಸ್ವಾಮಿ, ಕರಾಟೆ ಶಿಕ್ಷಕ ಮಣಿ, ಎಸ್.ವಿಶ್ವನಾಥ್, ಮನೋಹರ್, ಸುಶ್ಮಿತಾ ಮಕ್ಕಿಕೊಪ್ಪ, ಹರೀಶ್ ವಿನಾಯಕನಗರ, ಶಿಬಿರಾರ್ಥಿಗಳು, ಪಾಲರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net