ಆತಿಥೇಯ ಮುದ್ದಂಡ ತಂಡಕ್ಕೆ ಸೋಲು

kodava hocky
Published on

ಮಡಿಕೇರಿ: ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಮುದ್ದಂಡ ಕಪ್ ಹಾಕಿ ಉತ್ಸವದಲ್ಲಿ ಆತಿಥೇಯ ಮುದ್ದಂಡ ತಂಡ ಚಿಲ್ಲವಂಡ ತಂಡದ ಎದುರು ಸೋಲನ್ನು ಎದುರಿಸಿ ಟೂರ್ನಿಯಿಂದ ನಿರ್ಗಮಿಸಿದೆ.

ಮೈದಾನ ಒಂದರಲ್ಲಿ ನಡೆದ ಪಂದ್ಯಾಟದಲ್ಲಿ ಆತಿಥೇಯ ಮುದ್ದಂಡ ತಂಡ ಚಿಲ್ಲವಂಡ ತಂಡವನ್ನು ಎದುರಿಸಿತು. ನಿಗಧಿತ ಅವಧಿಯಲ್ಲಿ ಚಿಲ್ಲವಂಡ ತಂಡ ಮುದ್ದಂಡ ತಂಡವನ್ನು ೨-೦ ಅಂತರದಿಂದ ಮಣಿಸಿತು. ಚಿಲ್ಲವಂಡ ತಂಡದ ಪರ ಮಾಚಯ್ಯ ಹಾಗೂ ಅಯ್ಯಪ್ಪ ತಲಾ ಒಂದೊಂದು ಗೋಲು ಗಳಿಸಿದರು. ಮುದ್ದಂಡ ತಂಡದ ರಿಶಿನ್ ಸುಬ್ಬಯ್ಯ ಪಂದ್ಯ ಶ್ರೇಷ್ಟ ಪ್ರಶಸ್ತಿ ಪಡೆದುಕೊಂಡರು.

ಪೊಂಜಂಡ ಮತ್ತು ಪಟ್ಟಮಾಡ ತಂಡಗಳ ನಡುವಿನ ಪಂದ್ಯದಲ್ಲಿ ೩-೦ ಗೋಲುಗಳ ಅಂತರದಲ್ಲಿ ಪಟ್ಟಮಾಡ ತಂಡ ಗೆಲುವು ದಾಖಲಿಸಿತು. ಮುದ್ದಿಯಡ ಮತ್ತು ಚಿಮ್ಮಣಮಾಡ ನಡುವಿನ ಪಂದ್ಯದಲ್ಲಿ ಮುದ್ದಿಯಡ ತಂಡ ೩-೦ ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು.

ಬೊಳೆಯಾಡಿರ ಮತ್ತು ಪೆಮ್ಮುಡಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಬೊಳೆಯಾಡಿರ ೩-೦ ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಕೊಂಡಿರ ಮತ್ತು ಪೇರಿಯಂಡ ನಡುವಿನ ಪಂದ್ಯದಲ್ಲಿ ಕೊಂಡಿರ ೨-೦ ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಕುಟ್ಟಂಡ(ಕಾರ್ಮಾಡ್) ಮತ್ತು ಪಾರುವಂಗಡ ವಾಕ್‌ಓವರ್‌ನಲ್ಲಿ ಕುಟ್ಟಂಡ ತಂಡ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು.

ಕಂಜಿತಂಡ ಮತ್ತು ಪೊನ್ನಕಚ್ಚಿರ ನಡುವಿನ ಪಂದ್ಯದಲ್ಲಿ ಕಂಜಿತಂಡ ೨-೦ ಗೋಲು ಅಂತರದಲ್ಲಿ ಗೆಲುವು ಸಾಧಿಸಿತು. ಮೇವಡ ಮತ್ತು ಚಾರಿಮಂಡ ನಡುವಿನ ಪಂದ್ಯದಲ್ಲಿ ಮೇವಡ ತಂಡ ೪-೦ ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು.

ಮೈದಾನ ೨ರಲ್ಲಿ ನಡೆಯಬೇಕಿದ್ದ ನಾಪನೆರವಂಡ ಮತ್ತು ನೆಲ್ಲಪಟ್ಟಿರ ನಡುವಿನ ಪಂದ್ಯದಲ್ಲಿ ನಾಪನೆರವಂಡ ತಂಡ ವಾಕ್ ಓವರ್ ಮೂಲಕ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು. ತೀವ್ರ ಹಣಾಹಣಿಯಿಂದ ಕೂಡಿದ್ದ ಮುದ್ದಂಡ ಕಪ್ ಹಾಕಿ ಉತ್ಸವದ ಪಂದ್ಯವೊಂದರಲ್ಲಿ ಕೋಣಿಯಂಡ ತಂಡ ಟೈಬ್ರೇಕರ್ ಮೂಲಕ ಎದುರಾಳಿ ಕಲ್ಲುಮಾಡಂಡ ತಂಡವನ್ನು ೬-೩ ಗೋಲುಗಳ ಅಂತರದಿಂದ ಮಣಿಸಿ ನಿಟ್ಟುಸಿರು ಬಿಟ್ಟಿತು. ದಾಳಿ ಪ್ರತಿದಾಳಿಯ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಕಲ್ಲುಮಾಡಂಡ ತಂಡದ ಚಮನ್ ಚಂಗಪ್ಪ ೧೩ನೇ ನಿಮಿಷವೆ ಆಕರ್ಷಕ ಗೋಲು ಸಿಡಿಸಿ ತಂಡಕ್ಕೆ ೧-೦ ಗೋಲಿನ ಮುನ್ನಡೆಯನ್ನು ದೊರಕಿಸಿಕೊಟ್ಟರು. ಸಮಬಲದ ಗೋಲಿಗಾಗಿ ದಾಳಿಯ ಆಟಕ್ಕಿಳಿದ ಕೋಣಿಯಂಡ ತಂಡಕ್ಕೆ ೨೮ನೇ ನಿಮಿಷದಲ್ಲಿ ದೊರೆತ ಅವಕಾಶವನ್ನು ತಂಡದ ಕುಟ್ಟಪ್ಪ ಗೋಲಾಗಿ ಪರಿವರ್ತಿಸುವುದರೊಂದಿಗೆ ನಿಗದಿತ ಅವಧಿಯಲ್ಲಿ ಪಂದ್ಯ ೧-೧ ಗೋಲಿನಿಂದ ಡ್ರಾ ಗೊಂಡಿತು.

ವಿಜೇತ ತಂಡವನ್ನು ನಿರ್ಧರಿಸಲು ಅಳವಡಿಸಿದ ಟೈಬ್ರೇಕರ್‌ನಲ್ಲಿ ಕೋಣಿಯಂಡ ೫ ಗೋಲು ಗಳಿಸಿದರೆ, ಕಲ್ಲುಮಾಡಂಡ ತಂಡ ೨ ಗೋಲುಗಳನ್ನಷ್ಟೆ ಗಳಿಸಲು ಶಕ್ತವಾಯಿತು. ಅಂತಿಮವಾಗಿ ಕೋಣಿಯಂಡ ತಂಡ ೬-೩ ಗೋಲಿನ ಅಂತರದ ಗೆಲುವನ್ನು ತನ್ನದಾಗಿಸಿಕೊಂಡಿತು.

ಕೊಲತಂಡ ಮತ್ತು ಮಲ್ಲಂಡ ತಂಡಗಳ ನಡುವಿನ ಪಂದ್ಯದಲ್ಲಿ ಮಲ್ಲಂಡ ತಂಡ ೫-೦ ಗೋಲು ಅಂತರದಿಂದ ಜಯ ಸಾಧಿಸಿತು. ಪಾಂಡಿರ ಮತ್ತು ಪೋರಂಗಡ ತಂಡದ ನಡುವಿನ ಪಂದ್ಯದಲ್ಲಿ ಪಾಂಡಿರ ತಂಡ ವಾಕ್ ಓವರ್‌ನಲ್ಲಿ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು. ಮಾಳೆಯಂಡ ಮತ್ತು ಬಲ್ಯಂಡ ತಂಡದ ನಡುವಿನ ಪಂದ್ಯದಲ್ಲಿ ಮಾಳೆಯಂಡ ತಂಡ ೨-೦ ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ಮುಂಡಚಾಡಿರ ಮತ್ತು ಅಯ್ಯಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಮುಂಡಚಾಡಿರ ತಂಡ ೩-೦ ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ಅಮ್ಮೆಕಂಡ ಮತ್ತು ಚೆಂಬಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ೩-೦ ಗೋಲುಗಳ ಅಂತರದಲ್ಲಿ ಚೆಂಬಂಡ ಗೆಲುವು ದಾಖಲಿಸಿತು. ಬೊಟ್ಟಂಗಡ ಮತ್ತು ಉದ್ದಪಂಡ ತಂಡಗಳ ನಡುವಿನ ಪಂದ್ಯದಲ್ಲಿ ಬೊಟ್ಟಂಗಡ ೩-೦ ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು.

ಮೈದಾನ ೩(ಪೊಲೀಸ್ ಕವಾಯತ್ತು ಮೈದಾನ) ನಡೆದ ಚಿಂಡಮಾಡ ಮತ್ತು ಕೇಚೆಟ್ಟಿರ(ಬೆಂಗೂರು) ನಡುವಿನ ಪಂದ್ಯದಲ್ಲಿ ಚಿಂಡಮಾಡ ತಂಡ ೩-೧ ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಕುಂಚೆಟ್ಟಿರ ಮತ್ತು ಮಳವಂಡ ತಂಡಗಳ ನಡುವಿನ ಪಂದ್ಯದಲ್ಲಿ ಮಳವಂಡ ತಂಡ ೩-೧ ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಅರಮಣಮಾಡ, ತೇಲಪಂಡ, ಕುಂಡ್ರಂಡ ತಂಡಗಳು ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು.

ಇಂದಿನ ಪಂದ್ಯಾಟದ ವಿವರ

ಮೈದಾನ-೧

ಬೆಳಿಗ್ಗೆ ೯ ಗಂಟೆಗೆ ಕುಂಧೀರ ಮತ್ತು ಪೊನ್ನಿಮಾಡ, ೧೦ ಗಂಟೆಗೆ ಚಟ್ಟಂಗಡ ಮತ್ತು ಕುಟ್ಟಂಡ(ಅಮ್ಮತ್ತಿ), ೧೧ ಗಂಟೆಗೆ ಕನ್ನಂಬೀರ ಮತ್ತು ಪಾಲೆಂಗಡ, ಮಧ್ಯಾಹ್ನ ೧೨ ಗಂಟೆಗೆ ಕುಟ್ಟೇಟಿರ ಮತ್ತು ಪುಟ್ಟಿಚಂಡ, ೧ ಗಂಟೆಗೆ ಬೈರೇಟಿ ಮತ್ತು ಪಳೆಯಂಡ(ಹಮ್ಮಿಯಾಲ), ೨ ಗಂಟೆಗೆ ಮಂದಂಗಡ ಮತ್ತು ಐಮಂಡ, ೩ ಗಂಟೆಗೆ ಮಂಡೇಡ ಮತ್ತು ದೇಯಂಡ ಕುಟುಂಬಗಳು ಹಣಾಹಣಿ ನಡೆಸಲಿದೆ.

ಮೈದಾನ-೨

ಬೆಳಿಗ್ಗೆ ೯ ಗಂಟೆಗೆ ಬಟ್ಟಕಾಳಂಡ ಮತ್ತು ಅಣ್ಣಾಡಿಯಂಡ, ೧೦ ಗಂಟೆಗೆ ಚೇರಂಡ ಮತ್ತು ಚೆನ್ನಪಂಡ, ೧೧ ಗಂಟೆಗೆ ನಂದಿನೆರವಂಡ ಮತ್ತು ಐತಿಚಂಡ, ಮಧ್ಯಾಹ್ನ ೧೨ ಗಂಟೆಗೆ ಮುಂಡಂಡ ಮತ್ತು ಅಮ್ಮಂಡ, ೧ ಗಂಟೆಗೆ ಕಟ್ಟೇರ ಮತ್ತು ಮಾಳೇಟಿರ (ಕೆದಮುಳ್ಳೂರು), ೨ ಗಂಟೆಗೆ ಚೇಂದ್ರಿಮಾಡ ಮತ್ತು ಸುಳ್ಳಿಮಾಡ, ೩ ಗಂಟೆಗೆ ಮಂಡೋಟಿರ ಮತ್ತು ಚೋಡುಮಾಡ ಕುಟುಂಬಗಳು ಹಣಾಹಣಿ ನಡೆಸಲಿದೆ.

ಮೈದಾನ-೩

ಬೆಳಿಗ್ಗೆ ೯ ಗಂಟೆಗೆ ಚೋಕಿರ ಮತ್ತು ವಳ್ಳಂಡ, ೧೦ ಗಂಟೆಗೆ ಚೊಟ್ಟೆಯಂಡ ಮತ್ತು ತೆಕ್ಕಡ, ೧೧ ಗಂಟೆಗೆ ಕಾಯಪಂಡ ಮತ್ತು ಉಪ್ಪಂಗಡ, ಮಧ್ಯಾಹ್ನ ೧೨ ಗಂಟೆಗೆ ಮಾಳೆಟೀರ (ಕುಕುಳೂರು) ಮತ್ತು ಅವರೆಮಾಡಂಡ, ೧ ಗಂಟೆಗೆ ಕಾವಡಿಚಂಡ ಮತ್ತು ಕಾಳಚಂಡ, ೨ ಗಂಟೆಗೆ ಮೇಕೇರಿರ ಮತ್ತು ಕೈಬುಲಿರ, ೩ ಗಂಟೆಗೆ ತೊಲಂಡ ಮತ್ತು ಉಳ್ಳಿಯಡ ಕುಟುಂಬಗಳು ಹಣಾಹಣಿ ನಡೆಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net