

ಯಾದಗಿರಿ: ಗುರುಮಠಕಲ್ ತಾಲೂಕಿನ ಗಣಪೂರ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿುಕ ಶಾಲೆ ಮೂಲ ಸೌಕರ್ಯದಿಂದ ವಂಚಿತವಾಗಿದ್ದು, ಯಾವುದೇ ಕ್ಷಣದಲ್ಲಾದರೂ ಮಕ್ಕಳ ಪ್ರಾಣ ಬಲಿ ತಗೆದುಕೊಳ್ಳುವ ಸಾಧ್ಯತೆಗಳಿವೆ.
ಕಳೆದೆರಡು ವಾರದಿಂದ ಸತತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಶಾಲಾ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು, ಛಾವಣಿ ಸೋರುತ್ತಿದೆ. ಅಲ್ಲದೆ ಕಬ್ಬಿಣದ ಸಲಾಕೆಗಳು ತೇಲಿದ್ದು, ಮೇಲಿನಿಂದ ಆಗಾಗ ಸಿಮೆಂಟ್ ಮಿಶ್ರಿತ ಜಲ್ಲಿಕಲ್ಲುಗಳು ವಿದ್ಯಾಥರ್ಿಗಳ ಮೇಲೆ ಉದುರುತ್ತಿವೆ. ಇದರಿಂದ ಮಕ್ಕಳು ಆತಂಕದಲ್ಲೇ ಪಾಠ ಕಲಿಯುವಂತಾಗಿದೆ.
ಶಾಲೆಯ ಹಿಂದೆ ಬೃಹತ್ ಗುಂಡಿ ನಿಮರ್ಾಣಗೊಂಡಿದ್ದು, ಕೊಳಚೆ ನೀರು ಸಂಗ್ರಹಗೊಂಡು ಸಾಂಕ್ರಾಮಿಕ ರೋಗ ಹರಡುತ್ತಿದೆ. ಇದರಿಂದ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಹಿಂದೇಟು ಹಾಕುತ್ತಿದ್ದಾರೆ. 200 ವಿದ್ಯಾಥರ್ಿಗಳ ದಾಖಲಾತಿ ಹೊಂದಿರುವ ಈ ಶಾಲೆಯ ಹಾಲತ್ ಕೆಟ್ಟಿರುವ ಕಾರಣ ನಿತ್ಯ 10 ರಿಂದ 20 ಮಕ್ಕಳು ಮಾತ್ರ ಬರುತ್ತಿದ್ದಾರೆ.
ಪರಸ್ಥಿತಿ ಹೀಗಿದ್ದರೂ ಶಿಕ್ಷಣ ಇಲಾಖೆ ಅಕಾರಿಗಳು ಹಾಗೂ ಜನಪ್ರತಿನಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಪಾಳಕರು ಆರೋಪಿಸಿದ್ದಾರೆ. ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆ ಕೂಡಲೇ ಈ ಬಗ್ಗೆ ಗಮನ ಹರಿಸಿ ಅವ್ಯವಸ್ಥೆ ಸರಿಪಡಿಸಬೇಕು. ಇಲ್ಲದಿದ್ದಲ್ಲಿ ಪಾಲಕರೊಂದಿಗೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಉಮೇಶ ಮುದ್ನಾಳ್, ಗ್ರಾಮಸ್ಥರಾದ ಆಂಜನೇಯ ಬೆಳಗೇರಿ, ತಾಯಪ್ಪ ಕಾಳಬೆಳಗುಂದಿ, ನರಸಪ್ಪ, ಶಂಕರ, ಎಸ್ಡಿಎಂಸಿ ಅಧ್ಯಕ್ಷ ಬಸವರಾಜ, ಗ್ರಾಪಂ ಸದಸ್ಯರಾದ ನರಸಿಂಗಪ್ಪ, ಭೀಮರಾಯ, ತಾಯಪ್ಪ ಹೊಸಡಿ, ನಿಂಗಪ್ಪ, ಚೆನ್ನಪ್ಪ, ಭೀಮರಾಯ ಬಂಕಲಗಿ, ಕಾಂತು, ಮಾದೇವಪ್ಪ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.