ಆತಂಕದಲ್ಲಿ ಟೊಮ್ಯಾಟೊ ಬೆಳೆಗಾರರು

Capture
Published on

ರಾಜಕುಮಾರ ಹೊನ್ನಾಡೆ ಹುಲಸೂರು

ಒಂದು ವಾರದಿಂದ ತರಕಾರಿ ಮಾರುಕಟ್ಟೆಯಲ್ಲಿ ಟೊಮ್ಯಾಟೊ ಬೆಲೆ ದಿಢೀರ್ ಕುಸಿದಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.

ದೇವನಾಳ ಗ್ರಾಮದಲ್ಲಿ 25ಕ್ಕೂ ಹೆಚ್ಚು ರೈತರು 50-60 ಎಕರೆ ಪ್ರದೇಶದಲ್ಲಿ ಟೊಮ್ಯಾಟೊ ಬೇಸಾಯ ಮಾಡಿದ್ದಾರೆ. ಆದರೆ ಕಟಾವಿಗೆ ಬಂದ ಸಮಯದಲ್ಲಿ ದರ ಪಾತಾಳಕ್ಕೆ ಇಳಿದಿದೆ. ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸಿದ ಖಚರ್ು ಸಹ ಬರದಂತಾಗಿದ್ದರಿಂದ ರೈತರು ಟೊಮ್ಯಾಟೊ ನಾಲೆಗೆ ಎಸೆಯುತ್ತಿರುವುದು, ಜಾನುವಾರುಗಳಿಗೆ ಹಾಕುತ್ತಿದ್ದಾರೆ.

ತಿಂಗಳ ಹಿಂದೆ 25 ಕೆಜಿ ಒಂದು ಪ್ಲಾಸ್ಟಿಕ್ ಕ್ಯಾರೇಟ್ಗೆ 700-800 ರೂ. ಇತ್ತು. ಆದರೀಗ 150 ರೂ.ಗೂ ಯಾರೂ ಕೇಳುತ್ತಿಲ್ಲ ಎಂದು ರೈತರು ಗೋಳಿಡುತ್ತಿದ್ದಾರೆ. ಒಂದು ಎಕರೆ ಟೊಮ್ಯಾಟೊ ಬೆಳೆಯಲು ಎರಡು ಲಕ್ಷ ರೂ. ಖಚರ್ಾಗುತ್ತದೆ. ಬೆಲೆ ಕುಸಿತದಿಂದ 50-60 ಸಾವಿರ ರೂ. ಸಹ ವಾಪಸ್ ಬರುತ್ತಿಲ್ಲ. ಮುಂದೇನು ಮಾಡಬೇಕು ಎಂಬ ಚಿಂತೆ ಕಾಡುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಆರ್ಥಿಕ ಸ್ಥಿತಿ ಸುಧಾರಣೆ, ಸಾಲ ತೀರಿಸುವುದು ಇತರ ನಿರೀಕ್ಷೆಗಳನ್ನಿಟ್ಟುಕೊಂಡು ಟೊಮ್ಯಾಟೊ ಬೆಳೆದಿದ್ದೇವೆ. ಹೆಚ್ಚಿನ ಕೂಲಿ ನೀಡಿದರೂ ಕಾಮರ್ಿಕರು ಸಿಗುತ್ತಿಲ್ಲ. ಇಂಥ ಕಷ್ಟಗಳ ಮಧ್ಯೆ ದಿಢೀರ್ ಬೆಲೆ ಕುಸಿದಿರುವುದು ದಿಕ್ಕು ತೋಚದಂತೆ ಮಾಡಿದೆ. ವ್ಯಾಪಾರಿಗಳು ನಮ್ಮ ತೋಟಗಳಿಗೆ ಬರಲು ಸಿದ್ಧರಿಲ್ಲ. ಹೀಗಾಗಿ ಸಂಬಂಧಿತ ಅಧಿಕಾರಿಗಳು ನಷ್ಟ ಅನುಭವಿಸಿದ ರೈತರಿಗೆ ಬೆಳೆ ಪರಿಹಾರ ನೀಡಬೇಕು ಎಂದು ಬೆಳೆಗಾರರಾದ ಧನರಾಜ ಜಾಮಖಂಡೆ, ಜಾಫರ್ ಅಲಿಮಸಾಬ್, ಶ್ರೀನಿವಾಸ ಮಾಳಿ, ಅಕ್ಷಯ ಮಾಳಿ, ದಸ್ತಗೀರ್ ಕಲ್ಯಾಣಿವಾಲೆ, ಖಾಜಾಮಿಯಾ ಪಠಾಣ್, ಇಫರ್ಾನ್ ಕಲ್ಯಾಣಿವಾಲೆ, ಚೇತನ್ ಗಿರಿ, ವಿಠ್ಠಲ್ ಬಿರಾದಾರ, ದಿಲೀಪ ಜಾಮಖಂಡೆ ಒತ್ತಾಯಿಸಿದ್ದಾರೆ.

ನಾಲ್ಕು ಎಕರೆಯಲ್ಲಿ 6 ಲಕ್ಷ ರೂ. ಖರ್ಚು ಮಾಡಿ ಉತ್ತಮ ತಳಿಯ ಟೊಮ್ಯಾಟೊ ಸಸಿಗಳನ್ನು ನಾಟಿ ಮಾಡಿದ್ದೇನೆ. ಎರಡು ದಿನಕ್ಕೊಮ್ಮೆ ಔಷಧ ಸಿಂಪಡಿಸಿ ಮಕ್ಕಳಂತೆ ಪೋಷಣೆ ಮಾಡಿರುವೆ. ಆದರೆ ಏಕಾಏಕಿ ಬೆಲೆ ಕುಸಿತದಿಂದ ಟೊಮ್ಯಾಟೊ ಖರೀದಿಗೆ ಯಾರೂ ಬರುತ್ತಿಲ್ಲ.
| ತಾಜುದ್ದೀನ್ ಕಲ್ಯಾಣಿವಾಲೆ, ಟೊಮ್ಯಾಟೊ ಬೆಳೆದ ಯುವ ರೈತ, ದೇವನಾಳ

ನಮ್ಮೂರಲ್ಲಿ ಟೊಮ್ಯಾಟೊ ಬೆಳೆದ ನೂರಾರು ರೈತರು ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ. ಮಾರುಕಟ್ಟೆಯಲ್ಲಿ ಬೆಲೆಯಿಲ್ಲದ ಕಾರಣ ಹಣ್ಣುಗಳನ್ನು ಜಾನುವಾರುಗಳಿಗೆ ಹಾಕುತ್ತಿದ್ದಾರೆ. ಸರ್ಕಾರ ರೈತರ ಸಹಾಯಕ್ಕೆ ಬರಬೇಕು.
| ಧನರಾಜ ಜಾಮಖಂಡೆ, ರೈತ ಮುಖಂಡ ದೇವನಾಳ

ಮಾರುಕಟ್ಟೆಯಲ್ಲಿ ಟೊಮ್ಯಾಟೊ ಬೆಲೆ ಕುಸಿತವಾಗಿರುವುದು ಕಂಡುಬರುತ್ತಿದೆ. ರೈತರು ಬೆಳೆದ ಟೊಮ್ಯಾಟೊ ಮಾರಾಟ ಮಾಡಲು ನಗರ ಪ್ರದೇಶದಲ್ಲಿ ಮಾರುಕಟ್ಟೆ ವ್ಯವಸ್ಥೆ ಇದೆ. ರೈತರಿಗೆ ಸೂಕ್ತ ಮಾಹಿತಿ ನೀಡಿ ಹೆಚ್ಚು ಬೆಲೆ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು.
| ಸಂತೋಷ ತಾಂಡೂರ, ಹಿರಿಯ ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ ಬಸವಕಲ್ಯಾಣ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net