

ಚಿತ್ರದುರ್ಗ: ಚಿತ್ರದುರ್ಗ ತಾಲೂಕು ಕಡ್ಲೇಗುದ್ದು ಗ್ರಾಮದಲ್ಲಿ ಹಲವು ದಿನಗಳಿಂದ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದ ಚಿರತೆ ಬೋನಿಗೆ ಬಿದ್ದಿದೆ.
ಗ್ರಾಮಸ್ಥರ ದೂರಿನ ಮೇರೆಗೆ ಅರಣ್ಯಇಲಾಖೆ ಸಿಬ್ಬಂದಿ ಇರಿಸಿದ್ದ ಬೋನಿಗೆ ಶನಿವಾರ ರಾತ್ರಿ ಬಿದ್ದಿದೆ. ಅಂದಾಜು ಒಂದೂವರೆ ವರ್ಷದ ಹೆಣ್ಣು ಚಿರತೆಯನ್ನು ನಗರದ ಆಡು ಮಲ್ಲೇಶ್ವರ ಮೃಗಾಲಯಕ್ಕೆ ತರಲಾಗಿದೆ. ಪಶು ವೈದ್ಯರಾದ ಡಾ.ಮುರುಗೇಶ್, ಡಾ. ಹರೀಶ್ ಅದರ ಆರೋಗ್ಯ ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಿದ್ದಾರೆ.
ಪಶು ವೈದ್ಯರ ಸಲಹೆ ಹಾಗೂ ಮೇಲಧಿಕಾರಿಗಳ ಅನುಮತಿ ಬಳಿಕ ಚಿರತೆಯನ್ನು ಕಾಡಿಗೆ ಬಿಡುವ ಕುರಿತಂತೆ ತೀರ್ಮಾನಿಸಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಆರ್. ವಸಂತ ಕುಮಾರ್ ತಿಳಿಸಿದ್ದಾರೆ. ಡಿಆರ್‌ಎಫ್‌ಒಗಳಾದ ಪ್ರದೀಪ್ ಕೇಸರಿ, ವೆಂಕಟೇಶ್ ಇದ್ದರು.