

ಬೀದರ್: ಆಣದೂರ ಗ್ರಾಮದ ಸರ್ವಜ್ಞ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಮತ್ತು ಶಿಕ್ಷಕರ ದಿನಾಚರಣೆ ಜರುಗಿತು. ಮಕ್ಕಳು ಕೃಷ್ಣ-ರಾಧೆ ವೇಷಧರಿಸಿ ಕಣ್ಮನ ಸೆಳೆದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ವಲಯ ಮೇಲ್ವಿಚಾರಕ ಭೀಮಣ್ಣ ಮಾತನಾಡಿದರು. ಗ್ರಾಮ ವಿಕಾಸ ಟ್ರಸ್ಟ್ ಅಧ್ಯಕ್ಷ ಬಸವರಾಜ ಬಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡ ಶಿವಕುಮಾರ ಹಿರೇಮಠ ಕಪಲಾಪುರ, ಬಸವಶ್ರೀ ಪಬ್ಲಿಕ್ ಶಾಲೆ ಅಧ್ಯಕ್ಷ ಚನ್ನಬಸವ, ಪ್ರೌಢಶಾಲೆ ಮುಖ್ಯಗುರು ಸಂತೋಷ ಗೋರ್ಟಾ ಪ್ರಾಥಮಿಕ ಶಾಲೆ ಮುಖ್ಯಗುರು ದಿವ್ಯಾರಾಣಿ ಇದ್ದರು.