ಆಡಿಟರ್ ಮನೆ, ಕಚೇರಿಯಲ್ಲಿ ಬೆಂಕಿ ಅವಘಡ

4
Published on

ಹೊಸೂರು: ತಾಲೂಕು ಕಚೇರಿ ಸಮೀಪದಲ್ಲಿರುವ ಆಡಿಟರ್ ಬ್ಯಾಟರಾಯಸ್ವಾಮಿ ಅವರ ಮನೆ ಮತ್ತು ಕಚೇರಿಗೆ ಬೆಂಕಿ ಬಿದ್ದಿದೆ. ಮನೆಯವರೆಲ್ಲ ಸಂಬಂಧಿಕರ ಮನೆಗೆ ಹೋಗಿದ್ದಾಗ ಅವಘಡ ಸಂಭವಿಸಿದ್ದು, ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಮನೆಯ ಬೀಗ ಒಡೆದು ಬೆಂಕಿ ನಂದಿಸಿದ್ದಾರೆ. ಒಂದೇ ಸೂರಿನಲ್ಲಿ ಮನೆ ಹಾಗೂ ಕಚೇರಿಯಿದ್ದು, ಶನಿವಾರ ಬೆಳಗ್ಗಿನಜಾವ 3ರ ಸಮಯದಲ್ಲಿ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಗೃಹೋಪಯೋಗಿ ವಸ್ತುಗಳು ಹಾಗೂ ಹಲವು ದಾಖಲೆಗಳು ಸುಟ್ಟುಕರಕಲಾಗಿವೆ. ಅಗ್ನಿಶಾಮಕ ದಳದವರು ಮನೆಯಲ್ಲಿದ್ದ ಭರ್ತಿಯಾಗಿದ್ದ ಮೂರು ಸಿಲಿಂಡರ್‌ಗಳನ್ನು ಹೊರ ತೆಗೆದು ಮತ್ತು ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net