ಆಡಿ ಕೃತ್ತಿಕೆ ಜಾತ್ರೆ: ಭದ್ರಗಿರಿಗೆ ಭದ್ರಾವತಿಯಿಂದ ಭಕ್ತ ಸಮೂಹ

23bddvt1 web
Published on

ಭದ್ರಾವತಿ: ತಾಲೂಕಿನ ಗಡಿ ಭಾಗವಾದ ಎಂ.ಸಿ.ಹಳ್ಳಿಯ ಭದ್ರಗಿರಿ ಶ್ರೀ ಶಿವಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಆಡಿ ಕೃತ್ತಿಕೆ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನೆರವೇರಿತು.

ಭದ್ರಾವತಿ-ತರೀಕೆರೆ ತಾಲೂಕಿನ ವಿವಿಧ ಭಾಗಗಳಿಂದ ಮಕ್ಕಳು, ಹಿರಿಯರು ಎನ್ನದೆ ಹರಕೆ ಹೊತ್ತ ಸಾವಿರಾರು ಭಕ್ತರು ಮೈಗೆ ಗಂಧ ಲೇಪನ ಮಾಡಿಕೊಂಡು ಕಾವಡಿ ಹೊತ್ತು ದಾರಿಯುದ್ದಕ್ಕೂ ಹರೋ...ಹರ... ಎಂದು ಸ್ವಾಮಿಯ ಸ್ಮರಿಸುತ್ತಾ ಸನ್ನಿಧಾನಕ್ಕೆ ಆಗಮಿಸಿ ತಮ್ಮ ಹರಕೆ ತೀರಿಸಿದರು.

ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ವಳ್ಳಿ-ದೇವಸೇನ ಸಮೇತರಾಗಿ ನೆಲೆಸಿರುವ ಶ್ರೀ ಶಿವಸುಬ್ರಮಣ್ಯ ಸ್ವಾಮಿಗೆ ವಿಶೇಷ ಪೂಜೆ, ಅಲಂಕಾರ ಮಾಡಲಾಗಿತ್ತು. ಶನಿವಾರ ಮುಂಜಾನೆ 4 ಗಂಟೆಯಿಂದಲೇ ವಿಶ್ವರೂಪ ದರ್ಶನ, ಅಭಿಷೇಕ, ಉತ್ಸವಪೂಜೆ ಹಾಗೂ ಕಾವಡಿ ಹರಕೆ ಸಮರ್ಪಣೆ ನಡೆಯಿತು. ಹರಕೆ ಹೊತ್ತ ಭಕ್ತರು ಶುಕ್ರವಾರದಿಂದಲೇ ದೇವಸ್ಥಾನಕ್ಕೆ ನಡೆದುಕೊಂಡು ಬಂದ ಭಕ್ತರು ಬೆಳಗಿನ ಪೂಜೆಗೆ ಪಾಲ್ಗೊಂಡು ಕಾವಡಿ ಹರಕೆ ತೀರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net