ಆಡಳಿತದಲ್ಲಿ ಹಸ್ತಕ್ಷೇಪ ಮಾಡಲ್ಲ

DSC_0102
Published on

ಬೀದರ್: ಜಿಲ್ಲೆಯ ಆಡಳಿತ ಸುಗಮವಾಗಿ ನಡೆಯಬೇಕು. ಜನರಿಗೆ ಸಕರ್ಾರಿ ಸೌಲಭ್ಯ, ಸೇವೆ ಯಾವುದೇ ಅಡ್ಡಿ ಇಲ್ಲದೆ ಸಿಗಬೇಕು. ತಾವು ಎಂದಿಗೂ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎನ್ನುವ ಮೂಲಕ ಸಚಿವ ಖಂಡ್ರೆ ಅವರು ಕೇಂದ್ರ ಸಚಿವ ಭಗವಂತ ಖೂಬಾ ಹೆಸರು ಹೇಳದೆ ತಿರುಗೇಟು ನೀಡಿದರು.
ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿ, ಕೆಲವರು ಅಭಿವೃದ್ಧಿಗೆ ತಡೆಯೊಡ್ಡಲು ಇಲ್ಲಸಲ್ಲದ ಸುಳ್ಳು ಆರೋಪ ಮಾಡುತ್ತಿದ್ದಾರೆ. ನಾಲ್ಕು ವರ್ಷದಿಂದ ಯಾವುದೇ ಉತ್ತಮ ಕಾರ್ಯ ಮಾಡದ, ಜನರಿಗೆ ಅನುಕೂಲ ಆಗುವಂಥ ಯೋಜನೆ ರೂಪಿಸದವರು ಇಂದು ಸುಳ್ಳು ಆರೋಪ ಮಾಡುತ್ತ ಕಾಲಹರಣ ಮಾಡುತ್ತಿದ್ದಾರೆ ಎಂದರು. ನಾನು ಸಚಿವನಾಗಿ 90ಕ್ಕೂ ಹೆಚ್ಚು ದಿನವಾಗಿದೆ. ಸಕರ್ಾರಕ್ಕೆ 100 ದಿನ ತುಂಬಿದೆ. ಈ ಮೂರು ತಿಂಗಳ ಅವಯಲ್ಲಿ ಒಂದೇ ಒಂದು ದಿನ ವಿಶ್ರಾಂತಿ ಪಡೆಯದೆ ನಿರಂತರ ಜನಸೇವೆ ಮಾಡುತ್ತ ಜಿಲ್ಲೆ ಅಭಿವೃದ್ಧಿಗೆ ಶ್ರಮಿಸುತ್ತಿರುವೆ. ಸಣ್ಣಪುಟ್ಟ ವಿಚಾರಗಳಿಗೆ ಮಹತ್ವ ನೀಡಿ ಅದನ್ನೇ ದೊಡ್ಡದು ಮಾಡಿ ಜನರ ದಾರಿ ತಪ್ಪಿಸುವುದರಿಂದ ಜಿಲ್ಲೆಗೆ ಒಳಿತಾಗುವುದಿಲ್ಲ. ನಾವೆಲ್ಲ ಜಿಲ್ಲೆ ಒಳಿತಿಗಾಗಿ ಕೆಲಸ ಮಾಡಬೇಕು. ಇಲ್ಲಿ ರಾಜಕೀಯ ಮಾತನಾಡುವುದು ಬೇಡ. ಜಿಲ್ಲೆ ಜನರ ಅಭಿವೃದ್ಧಿಗಾಗಿ ಶ್ರಮಿಸೋಣ ಎಂದು ಹೇಳಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net