

ಕಂಪ್ಲಿ: ರಾಜ್ಯದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ನಿತ್ಯ ಜೀವನದಲ್ಲಿ ಬಳಸುವ ಮೂಲಕ ಭಾಷೆಯನ್ನು ಪೋಷಿಸಬೇಕು ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.
ತಹಸಿಲ್ ಕಚೇರಿ ಬಳಿ ಕನ್ನಡ ಜ್ಯೋತಿ ರಥವನ್ನು ಕಸಾಪ ಸೇರಿ ನಾನಾ ಕನ್ನಡಪರ ಸಂಘಟನೆಗಳಿಂದ ಸ್ವಾಗತಿಸಿ, ಸೋಮವಾರ ಮಾತನಾಡಿದರು. ನಿತ್ಯ ಜೀವನ ಜತೆ ಆಡಳಿತದ ಎಲ್ಲ ಸ್ತರಗಳಲ್ಲಿ ಕನ್ನಡ ಭಾಷೆ ಹಾಸುಹೊಕ್ಕಾಗಬೇಕು ಎಂದರು. ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ್ ಮಾತನಾಡಿ, ಮಂಡ್ಯದಲ್ಲಿ ಡಿ.20ರಿಂದ ಮೂರು ದಿನ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ಸುಗೊಳಿಸುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕನ್ನಡ ಜ್ಯೋತಿ ರಥಯಾತ್ರೆ ಸಂಚರಿಸಲಿದೆ ಎಂದರು.
ತಹಸೀಲ್ದಾರ್ ಎಸ್.ಶಿವರಾಜ, ಅಧಿಕಾರಿಗಳಾದ ಆರ್.ಕೆ.ಶ್ರೀಕುಮಾರ್, ಕೆ.ಎಸ್.ಮಲ್ಲನಗೌಡ, ಬಿ.ರವೀಂದ್ರಕುಮಾರ್, ಕಸಾಪ ಪದಾಧಿಕಾರಿಗಳಾದ ಕೆ.ಎಂ. ಹೇಮಯ್ಯಸ್ವಾಮಿ, ಅಂಬಿಗರ ಮಂಜುನಾಥ, ಎಸ್.ಡಿ.ಬಸವರಾಜ, ಡಾ.ಎ.ಸಿ.ದಾನಪ್ಪ, ಬಳೆ ಮಲ್ಲಿಕಾರ್ಜುನ, ಹಾದಿಮನಿ ಕಾಳಿಂಗವರ್ಧನ, ಎಲಿಗಾರ ವೆಂಕಟರೆಡ್ಡಿ, ಬಡಿಗೇರ ಜಿಲಾನ್‌ಸಾಬ್, ಎಸ್.ವಿಜಯಲಕ್ಷ್ಮೀ, ಬೂದಗುಂಪಿ ಅಂಬಣ್ಣ, ಅಯ್ಯೋದಿ ವೆಂಕಟೇಶ, ಕೊಟ್ಟೂರು ರಮೇಶ ಇತರರಿದ್ದರು.