ಆಡಳಿತ ಭವನ ಬಳಿಯೇ ನ್ಯಾಯಾಲಯ ಕಟ್ಟಡಕ್ಕೂ ಸ್ಥಳ

Published on

ಹನೂರು: ತಾಲೂಕು ಆಡಳಿತ ಭವನ ನಿರ್ಮಿಸುವ ಬಳಿಯೇ ನ್ಯಾಯಾಲಯ ಕಟ್ಟಡ ಸ್ಥಾಪನೆಗೂ ಸ್ಥಳ ನೀಡುವುದಾಗಿ ಜಿಲ್ಲಾಕಾರಿ ಸಿ.ಟಿ. ಶಿಲ್ಪಾನಾಗ್ ತಿಳಿಸಿದರು.

ಹನೂರು ಸಮೀಪದ ಹುಲುಸುಗುಡ್ಡೆಯ ಬಳಿ ತಾಲೂಕು ಆಡಳಿತ ಭವನ ನಿರ್ಮಿಸಲು ಉದ್ದೇಶಿಸಿರುವ ಸ್ಥಳಕ್ಕೆ ಮಂಗಳವಾರ ಶಾಸಕ ಎಂ.ಆರ್.ಮಂಜುನಾಥ್ ಹಾಗೂ ಅಕಾರಿಗಳೊಂದಿಗೆ ಭೇಟಿ ನೀಡಿ ಮಾಹಿತಿ ಪಡೆದು ಪರಿಶೀಲಿಸಿದ ಬಳಿಕ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಹೊಸ ತಾಲೂಕಾಗಿ ರಚನೆಯಾಗಿರುವ ಹನೂರಿಗೆ ತಾಲೂಕು ಆಡಳಿತ ಭವನ ಇಲ್ಲ. ಇದರಿಂದ ವಿವಿಧ ಇಲಾಖೆಗೆ ಕಚೇರಿಗಳಿಲ್ಲ. ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿತ್ತು. ಇದೀಗ ಮಿನಿ ಆಡಳಿತಸೌಧ ನಿರ್ಮಾಣಕ್ಕೆ ಸರ್ಕಾರದಿಂದ 9.6 ಕೋಟಿ ರೂ. ಅನುಮೋದನೆಯಾಗಿದೆ. ಮುಂದಿನ ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದೆ. ಇನ್ನು ಮಿನಿ ಆಡಳಿತಸೌಧದಲ್ಲಿ ವಿವಿಧ ಇಲಾಖೆಯ ಕಚೇರಿಗಳು ಕಾರ್ಯನಿರ್ವಹಿಸುವುದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಹಾಗಾಗಿ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಇಲ್ಲಿಯೇ ನ್ಯಾಯಾಲಯ ಸ್ಥಾಪನೆ ಸಂಬಂಧ ಈಗಾಗಲೇ ಶಾಸಕರ ಜತೆ ಚರ್ಚಿಸಲಾಗಿದೆ. ನ್ಯಾಯಾೀಶರು ಸೂಕ್ತವಾದ ಜಾಗ ಇಚ್ಛಿಸಿದ್ದಲ್ಲಿ ಅಗತ್ಯ ಸ್ಥಳ ನೀಡಲಾಗುವುದು. ಇನ್ನು ಈಗಾಗಲೇ ನ್ಯಾಯಾಲಯವು ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅಗತ್ಯ ಮೂಲ ಸೌಕರ್ಯದ ಕೊರತೆಯಿಂದ ಮತ್ತೇ ಕೊಳ್ಳೇಗಾಲಕ್ಕೆ ಸ್ಥಳಾಂತರ ಮಾಡಲಾಗುವುದು ಎಂದು ತಿಳಿದು ಬಂದಿದೆ. ಈ ಸಂಬಂಧ ನ್ಯಾಯಾೀಶರ ಗಮನಕ್ಕೆ ತಂದು ಹನೂರಿನಲ್ಲಿಯೇ ಮುಂದುವರಿಸಲು ಅಗತ್ಯ ಕ್ರಮವಹಿಸುವುದಾಗಿ ತಿಳಿಸಿದರು.

ಗುತ್ತಿಗೆದಾರರ ವಿರುದ್ಧ ಎ್ಐಆರ್: ಕೊಳ್ಳೇಗಾಲ ಸಮೀಪದ ಉತ್ತಂಬಳ್ಳಿ ಬಳಿ ಮೇಲ್ಸೇತುವೆಯ ತಡೆಗೋಡೆ ಕಾಮಗಾರಿ ಪೂರ್ಣಗೊಂಡ ಒಂದು ವರ್ಷದೊಳಗೆ ಕುಸಿದಿರುವುದು ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದ್ದು, ಗಂಭೀರವಾಗಿ ಪರಿಗಣಿಸಲಾಗಿದೆ. ಈ ಸಂಬಂಧ ರಸ್ತೆ ಸುರಕ್ಷತಾ ಸಂಚಾರ ಸಚಿವಾಲಯಕ್ಕೆ ಗಮನಕ್ಕೆ ತರಲಾಗಿದೆ. ವಿಭಾಗೀಯ ಅಕಾರಿಗಳಿಗೆ ಪತ್ರ ಬರೆದಿದ್ದು, ರಸ್ತೆ ಗುಣಮಟ್ಟ ಪರೀಕ್ಷಾ ತಂಡವನ್ನು ಕಳುಹಿಸಿ ಕೊಡಬೇಕೆಂದು ತಿಳಿಸಲಾಗಿದೆ. ಗುಣಮಟ್ಟ ಹಾಗೂ ಪ್ರಮಾಣವನ್ನು ಪರೀಕ್ಷಿಸಲಿದ್ದಾರೆ. ಸಂಬಂಧಪಟ್ಟ ಗುತ್ತಿಗೆದಾರರ ವಿರುದ್ಧ ಎ್ಐಆರ್ ದಾಖಲಾಗಿದೆ. ಡಿಪಿಆರ್‌ನಂತೆ ಕಾಮಗಾರಿ ಕೈಗೊಳ್ಳಲು ಅಗತ್ಯ ಕ್ರಮವಹಿಸಲಾಗುವುದು ಎಂದು ಜಿಲ್ಲಾಕಾರಿ ತಿಳಿಸಿದರು.

ಮುಡಿಗುಂಡ ಸೇತುವೆ ಮೇಲ್ದರ್ಜೆಗೆ: ಈ ಸಂಬಂಧ ಸಿ.ಟಿ.ಶಿಲ್ಪಾನಾಗ್ ಮಾತನಾಡಿ, ಕೊಳ್ಳೇಗಾಲದ ಮುಡಿಗುಂಡ ಸೇತುವೆ 1934ರಲ್ಲಿ ನಿರ್ಮಾಣವಾಗಿದ್ದು, ಶಿಥಿಲಗೊಂಡಿದೆ. ಇದರಿಂದ ವಾಹನ ಸಂಚಾರಕ್ಕೆ ಅನನುಕೂಲವಾಗಿದೆ. ಹಾಗಾಗಿ ಸೇತುವೆಯನ್ನು ಮೇಲ್ದರ್ಜೆಗೇರಿಸುವುದು ಅಗತ್ಯವಾಗಿದ್ದು, ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿತ್ತು. ನಡೆದ ಕ್ಯಾಬಿನೆಟ್‌ನಲ್ಲಿ 15 ಕೋಟಿ ರೂ.ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ಅನುಮೋದನೆಯಾಗಿದೆ. ಈ ಸಂಬಂಧ ಸ್ಥಳಕ್ಕೆ ಇಂಜಿನಿಯರ್‌ಗಳೊಂದಿಗೆ ತೆರಳಿ ಪರಿಶೀಲನೆ ನಡೆಸಲಾಗಿದೆ ಎಂದರು.ಬಳಿಕ ತಾಲೂಕಿನ ಭೈರನತ್ತ ಗ್ರಾಮಕ್ಕೆ ಶಾಸಕರೊಂದಿಗೆ ತೆರಳಿದ ಜಿಲ್ಲಾಕಾರಿ ಅವರು ಎಸ್‌ಡಿಆರ್‌ಎ್ ಯೋಜನೆಯಡಿ ಸೇತುವೆ ನಿರ್ಮಿಸಲು ಉದ್ದೇಶಿಸಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೇತುವೆ ನಿರ್ಮಿಸಿ ಕೊಡುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು. ತಹಸೀಲ್ದಾರ್ ಕೆ.ಎನ್.ಚೈತ್ರಾ, ಆರ್‌ಐ ಶೇಷಣ್ಣ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net