

ಹುಲಸೂರು: ಮನುಷ್ಯ ಅವಶ್ಯಕತೆ ಇಲ್ಲದ ವಸ್ತುಗಳನ್ನು ಬಳಸಿ ಆಡಂಬರದ ಬದುಕು ಸಾಗಿಸುತ್ತಿದ್ದಾನೆ. ಆಡಂಬರದ ಬದುಕಿಗೆ ಕಡಿವಾಣ ಹಾಕಬೇಕು ಎಂದು ಬೈಲೂರಿನ ಶ್ರೀ ನಿಜಗುಣ ಪ್ರಭು ಸ್ವಾಮೀಜಿ ಹೇಳಿದರು.
ಪಟ್ಟಣದ ಗುರುಬಸವೇಶ್ವರ ಪ್ರೌಢ ಶಾಲೆ ಆವರಣದಲ್ಲಿ ಶ್ರೀ ಬಸವಕುಮಾರ ಶಿವಯೋಗಿಗಳವರ 45ನೇ ಪುಣ್ಯಸ್ಮರಣೊತ್ಸವ ನಿಮಿತ್ತ ಆಯೋಜಿಸಿರುವ ಅಕ್ಕನ ದಿವ್ಯ ದರ್ಶನ ಪ್ರವಚನ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ಹುಲಸೂರು ಶ್ರೀಗಳು ಮಾತೃಹೃದಯಿ ಆಗಿದ್ದು, ಸರಳ ಜೀವಿಯಾಗಿದ್ದಾರೆ. ಸದಾ ಬಾಗಿದ ತಲೆ ಮುಗಿದ ಕೈ ಎಂಬುವಂತೆ ಬದುಕುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀ ಡಾ.ಶಿವಾನಂದ ಸ್ವಾಮೀಜಿ, ಶಾಸಕ ರಾಜಶೇಖರ ಪಾಟೀಲ್, ಶರಣಪ್ಪ ಮಿಠಾರೆ, ಬಸವರಾಜ ಧನ್ನೂರ ಮಾತನಾಡಿದರು. ಅಲ್ಲಮ ಪ್ರಭು ನಾವದಗೇರೆ ಅವರನ್ನು ಸನ್ಮಾನಿಸಲಾಯಿತು.
ಸಾಯಗಾಂವದ ಶ್ರೀ ಶಿವಾನಂದ ಸ್ವಾಮೀಜಿ, ಜಿಪಂ ಸದಸ್ಯ ಸುಧೀರ ಕಾಡಾದಿ, ಜಿಪಂ ಮಾಜಿ ಉಪಾಧ್ಯಕ್ಷೆ ಲತಾ ಹಾರಕೂಡೆ, ಎಐಸಿಸಿ ಸದಸ್ಯ ಆನಂದ ದೇವಪ್ಪ, ಪ್ರಮುಖರಾದ ಶಿವಾರಾಜ ನರಶೆಟ್ಟಿ, ಶಿವಾನಂದ ಪಾಟೀಲ್, ಬಾಬುರಾವ ಗೌಂಡಗಾವೆ, ಸಂಗಮೇಶ ಪಾಟೀಲ್, ಬಸವರಾಜ ಹೊನ್ನಿಗನೂರ ಇತರರಿದ್ದರು.