ಆಟೋಗೆ ಟ್ರ್ಯಾಕ್ಟರ್ ಡಿಕ್ಕಿ ಇಬ್ಬರು ಸಾವು

Accident
Published on

ಅರಸೀಕೆರೆ : ತಾಲ್ಲೂಕಿನ ಕಮಲಾಪುರ ಸಮೀಪ ಪ್ಯಾಸೆಂಜರ್ ಆಟೋಗೆ ಎದುರುಗಡೆಯಿಂದ ಬಂದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಅಮ್ಮ ಮತ್ತು ಮಗಳು ಮೃತಪಟ್ಟಿದ್ದಾರೆ.
ಚನ್ನರಾಯಪಟ್ಟಣ ತಾಲ್ಲೂಕು ದುಗ್ಗೇನಹಳ್ಳಿ ಗ್ರಾಮದ ಪಾವರ್ತಮ್ಮ (45) ಹಾಗು ತಾಯಿ ಕೋಳಮ್ಮ (68) ಮೃತರು. ಪಾರ್ವತಮ್ಮ ಅವರು ಜಾವಗಲ್ ಸಮೀಪದ ತಾಯಿ ಮನೆಗೆ ಗುರುವಾರ ಬಂದಿದ್ದರು. ಕುಟುಂಬ ಸಮೇತ ನಾಗೇನಹಳ್ಳಿ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ.
ಕಮಲಾಪುರದಿಂದ ಮುಂದೆ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಟ್ರಾೃಕ್ಟರ್ ಚಾಲಕನ ಅಜಾಗರಕೂತೆಯ ಚಾಲನೆಯಿಂದ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಆಟೋ ಮೂರು ಬಾರಿ ಪಲ್ಟಿಯಾಗಿದೆ. ಸ್ಥಳೀಯರು ಕೂಡಲೇ ಗಾಯಾಳುಗಳನ್ನು ಅರಸೀಕೆರೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ತಲೆಗೆ ಹೆಚ್ಚಿನ ಏಟು ಬಿದ್ದಿದ್ದರಿಂದ ಕೋಳಮ್ಮ ಮಾರ್ಗಮಧ್ಯೆಯೇ ಮೃತಪಟ್ಟಿದ್ದರು. ಇನ್ನು ಪಾರ್ವತಮ್ಮ ಅವರನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಆಟೋದಲ್ಲಿದ್ದ ಪುಟ್ಟಮ್ಮ ಹಾಗು ಮಕ್ಕಳಾದ ಸುರೇಶ ಮತ್ತು ಪುನೀತ ಅವರು ಅರಸೀಕೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಾವಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net