ಆಟೋ-ಬೊಲೆರೋ ಡಿಕ್ಕಿ: ಮಹಿಳೆ ಸಾವು

IMG_20230804_123919
Published on

ಗಂಗಾವತಿ (ಕೊಪ್ಪಳ): ಬೈಕ್ ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಮತ್ತೊಂದು ವಾಹನಕ್ಕೆ ಆಟೋ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಮೃತಪಟ್ಟಿದ್ದು, ಆರು ಜನ ಗಾಯಗೊಂಡ ಘಟನೆ ವಡ್ಡರಹಟ್ಟಿ ಬಳಿಯ ಗುಡ್ಡದ ಕ್ಯಾಂಪ್ ಬಳಿ ನಡೆದಿದೆ.

ಗಂಗಾವತಿ ತಾಲೂಕಿನ ಉಡುಮಕಲ್ ಗ್ರಾಮದ ಶರಣಮ್ಮ (38) ಮೃತ ಮಹಿಳೆ‌. ಆಟೋದಲ್ಲಿದ್ದ ಇತರ ಆರು ಜನರಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳು ಉಡುಮಕಲ್ ಗ್ರಾಮದವರು. ಗ್ರಾಮದಿಂದ ಆಟೋದಲ್ಲಿ ಗಂಗಾವತಿ ನಗರಕ್ಕೆ ತೆರಳುತ್ತಿದ್ದರು.

ಈ ವೇಳೆ ಎದುರಿಗೆ ಬಂದ ಬೈಕ್ ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಭರದಲ್ಲಿ ಆಟೋ‌ ಚಾಲಕ ಎದುರಿಗೆ ಬರುತ್ತಿದ್ದ ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಗುದ್ದಿದ ರಭಸಕ್ಕೆ ಆಟೋ ನುಜ್ಜುಗುಜ್ಜಾಗಿದೆ. ತಕ್ಷಣ ಸ್ಥಳದಲ್ಲಿದ್ದ ಸ್ಥಳೀಯರು ಗಾಯಾಳುಗಳ ನೆರವಿಗೆ ಧಾವಿಸಿದ್ದಾರೆ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಗಂಗಾವತಿ ನಗರಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net