ಆಟೋ ಬಾಡಿಗೆ ಜಗಳ: ರಿಕ್ಷಾ ಚಾಲಕನಿಗೆ ಚಾಕು ಇರಿತ

Knife Stabbed
Published on

ಮೈಸೂರು: ಕೆಎಸ್‌ಆರ್‌ಟಿಸಿ ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಆಟೋ ಬಾಡಿಗೆ ವಿಚಾರವಾಗಿ ಇಬ್ಬರು ಯುವಕರು ಜಗಳ ತೆಗೆದು ಚಾಲಕನಿಗೆ ಚಾಕುವಿನಿಂದ ಇರಿದಿದ್ದಾರೆ.

ನಗರದ ಸಾತಗಳ್ಳಿ ನಿವಾಸಿ ನವೀದ್ ಪಾಷಾ(25) ಗಾಯಗೊಂಡವರು. ಓಂಕಾರ್ ಹಾಗೂ ಶೇಖರ್ ಎಂಬುವರ ವಿರುದ್ಧ ಲಷ್ಕರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಾಡಿಗೆ ವಿಚಾರವಾಗಿ ಆರೋಪಿಗಳು ಗಲಾಟೆ ಮಾಡಿ ನಿಂದಿಸಿ ಚಾಕುವಿನಿಂದ ಇರಿದಿದ್ದಾರೆ ಎಂದು ಗಾಯಾಳು ನೀಡಿದ ದೂರಿನ ಮೇರೆಗೆ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net