ಆಟೋ ಪಲ್ಟಿಯಾಗಿ ಅಪ್ರಾಪ್ತೆ ಸಾವು

Published on

ಕೊಳ್ಳೇಗಾಲ: ವಿವಾಹ ಸಮಾರಂಭಕ್ಕೆ ತೆರಳುತ್ತಿದ್ದ ಗೂಡ್ಸ್ ಆಟೋ ಆಯತಪ್ಪಿ ಪಲ್ಟಿಯಾಗಿ ಬಾಲಕಿ ಮೃತಪಟ್ಟು ಒಂದೇ ಕುಟುಂಬದ 15ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.


ತಾಲೂಕಿನ ಕೊತ್ತನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇರುದಾಳ್ ದೊಡ್ಡಿ ಗ್ರಾಮದ ನಿಂಗರಾಜು ಎಂಬುವರ ಪುತ್ರಿ ಸಂಜನಾ (16) ಮೃತರು. ವೀರಭದ್ರ, ಪುಟ್ಟಲಿಂಗಮ್ಮ, ಮಂಜುಳಾ, ಮಮತಾ, ಬಸವರಾಜು, ಪ್ರಭಾಸ್, ಭೂಮಿಕಾ, ನಾಗಮಣಿ, ಐಶ್ವರ್ಯ, ಕವಿತಾ, ಮಹೇಂದ್ರ, ಉದಯಕುಮಾರ್, ನಿತಿನ್, ಅಭಿ ಗಾಯಗೊಂಡವರು.


ತಾಲೂಕಿನ ಚಿಕ್ಕಲ್ಲೂರಿನಲ್ಲಿ ಭಾನುವಾರ ವಿವಾಹ ಕಾರ್ಯಕ್ರಮಕ್ಕೆಂದು ಗೂಡ್ಸ್ ಆಟೋದಲ್ಲಿ ತೆರಳುತ್ತಿದ್ದರು. ಕುಪ್ಪಸ್ವಾಮಿ ದೊಡ್ಡಿಯ ರಸ್ತೆಯಲ್ಲಿ ಆಟೋ ತೆರಳುತ್ತಿದ್ದಾಗ ಏಕಾಏಕಿ ಪಲ್ಟಿಯಾಗಿ ಸಂಜನಾ ಗಂಭೀರ ಗಾಯಗೊಂಡಳು. ಆಕೆಯನ್ನು ಪಟ್ಟಣದ ಖಾಸಗಿ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಮೃತಪಟ್ಟಳು. ಅಭಿ ಎಂಬಾತ ಗಂಭೀರ ಗಾಯಗೊಂಡಿದ್ದು ಆತನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದವರು ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ಪಟ್ಟಣದ ಖಾಸಗಿ ಆಸ್ಪತ್ರೆಗೆ ಶಾಸಕ ಆರ್.ನರೇಂದ್ರ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net