ಆಟೋ ಪಲ್ಟಿಯಾಗಿ 7 ಮಹಿಳೆಯರಿಗೆ ಗಾಯ

Published on

ಮಂಡ್ಯ: ಪಾಂಡವಪುರ ತಾಲೂಕಿನ ಮೇಲುಕೋಟೆ ಕಣಿವೆ ಬಳಿ ಗುರುವಾರ ಚಾಲಕನ ನಿಯಂತ್ರಣ ತಪ್ಪಿದ ಆಟೋ ಹಳ್ಳಕ್ಕೆ ಉರುಳಿಬಿದ್ದ ಪರಿಣಾಮ ಏಳು ಮಹಿಳೆಯರು ಗಾಯಗೊಂಡಿದ್ದಾರೆ.

ಮೇಲುಕೋಟೆ ಹೋಬಳಿಯ ಕನಗೋನಹಳ್ಳಿ ಮತ್ತು ಅಂದಾನಿಗೌಡಕೊಪ್ಪಲು ಗ್ರಾಮದ ಅರಸಮ್ಮ, ಲಕ್ಷ್ಮಮ್ಮ, ನಾಗಮ್ಮ, ದೇವಿರಮ್ಮ, ಬೆಟ್ಟಮ್ಮ, ಯಶೋದಮ್ಮ, ಪ್ರೇಮ ಗಾಯಗೊಂಡವರು.ಎಂದಿನಂತೆ ಸ್ವಗ್ರಾಮಗಳಿಂದ ಪಾಂಡವಪುರ ಮಾರ್ಗದಲ್ಲಿ ಸಿಗುವ ಅಮೃತಿ ಗ್ರಾಮಕ್ಕೆ ಆಟೋದಲ್ಲಿ ಕೂಲಿ ಕೆಲಸಕ್ಕಾಗಿ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅದೃಷ್ಟವಶಾತ್ ಎಲ್ಲರೂ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಗಾಯಾಳುಗಳು ಪಟ್ಟಣದ ಉಪವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಪಡೆಯುತ್ತಿದ್ದಾರೆ.

ಈ ಸಂಬಂಧ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆಸ್ಪತ್ರೆಗೆ ಭೇಟಿ ನೀಡಿದ ರೈತ ನಾಯಕಿ ಸುನೀತಾ ಪುಟ್ಟಣ್ಣಯ್ಯ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net