ಆಟೋ ಟೈರ್ ಬ್ಲಾಸ್ಟ್ ಬಾಲಕ ಮೃತ

Published on

ಬಳ್ಳಾರಿ : ತಾಲೂಕಿನ ಸಿಂದವಾಳ್ ಬಳಿ ಕೂಲಿ ಕಾರ್ಮಿಕರನ್ನು ಕರೆದುಕೊಂಡು ಚಲಿಸುತ್ತಿದ್ದ ಟಾಟಾ ಎಸಿ ವಾಹನವೊಂದು ಟೈರ್ ಬ್ಲಾಸ್ಟ್ ಆಗಿ ಆಟೋದಲ್ಲಿದ್ದ ಬಾಲಕನೊಬ್ಬ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.
ಮೋಕಾ ಗ್ರಾಮದ ನಿವಾಸಿ ರವಿಕುಮಾರ ( 16 ) ಮೃತ. ಮೋಕಾ ಗ್ರಾಮದಿಂದ ನೆರೆಯ ಆಂಧ್ರಪ್ರದೇಶಕ್ಕೆ ಹತ್ತಿ ಕೀಳಲು ಹೊರಟಿದ್ದ ಆಟೋದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರನ್ನು ಹತ್ತಿಸಿದ ಪರಿಣಾಮ ಟೈರ್ ಬ್ಲಾಸ್ಟ ಯಾಗಿದೆ. ಆಟೋದಲ್ಲಿದ್ದ 16 ಕ್ಕೂ ಅಧಿಕ ಜನರಿಗೆ ಸಣ್ಣಪುಟ್ಟ ಗಾಯಗಳಿದ್ದು, ಚಿಕಿತ್ಸೆಗಾಗಿ ಬಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ. ಸ್ಥಳಕ್ಕೆ ಮೋಕಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಮೋಕಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net