ಆಟೋ ಚಾಲಕರ ಕನ್ನಡ ಪ್ರೇಮ ಅನನ್ಯ

06-krp-04
Published on

ಕೆ.ಆರ್.ಪೇಟೆ: ವರ್ಷಪೂರ್ತಿ ಕನ್ನಡವನ್ನು ಮೆರೆದಾಡಿಸುವ ಆಟೋರಿಕ್ಷಾ ಚಾಲಕರ ನಾಡು ನುಡಿ ಪ್ರೇಮಕ್ಕೆ ಬೆಲೆಕಟ್ಟಲಾಗದು ಎಂದು ಸಚಿವ ಡಾ.ನಾರಾಯಣಗೌಡ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಸುಜನಾ ಆಟೋ ಚಾಲಕ ಮತ್ತು ಮಾಲೀಕರ ಸಂಘದ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡನಾಡಿನಲ್ಲಿ ಜೀವನ ಮಾಡುತ್ತಿರುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಕನ್ನಡವನ್ನು ಪೂಜಿಸಬೇಕು. ಹೆಚ್ಚಿನ ಮಟ್ಟದಲ್ಲಿ ಜನ ಸಾಮಾನ್ಯರು ಮತ್ತು ಚಾಲಕರು ಕನ್ನಡ ಉಳಿಸಿ ಬೆಳೆಸುವ ಕೆಲಸ ಮಾಡುತ್ತಿದ್ದಾರೆ. ಈ ಅಭಿಮಾನ ಅನನ್ಯ. ಇದನ್ನು ಅನುಸರಿಸಿ ಪ್ರತಿಯೊಬ್ಬರೂ ನಾಡುನುಡಿಯ ರಕ್ಷಣೆಗೆ ಮುಂದಾಗಬೇಕು ಎಂದರು. ಪೊಲೀಸ್ ವೃತ್ತ ನಿರೀಕ್ಷಕ ದೀಪಕ್ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ಪುರಸಭಾ ಸದಸ್ಯರಾದ ಎಚ್.ಆರ್.ಲೋಕೇಶ್, ಗಿರೀಶ್, ಆಟೋ ಚಾಲಕರ ಸಂಘದ ಗೌರವ ಅಧ್ಯಕ್ಷ ಎಚ್.ಬಿ.ಮಂಜುನಾಥ್, ಅಧ್ಯಕ್ಷ ಕೆ.ಎನ್.ವಾಸುದೇವ, ಚಾಲಕರಾದ ಲೋಕೇಶ್, ಗೋವಿಂದಾ, ಮಂಜು, ಸತ್ಯಪ್ಪ, ರಂಗಸ್ವಾಮಿ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net