ಆಟೋ ಚಾಲಕ ನದಿಗೆ ಹಾರಿ ಆತ್ಮಹತ್ಯೆ

death
Published on

ಗುರುಪುರ: ಮಂಗಳೂರಿನಲ್ಲಿ ಆಟೋ ಚಾಲಕರಾಗಿದ್ದ ಸತೀಶ್ ಪೂಜಾರಿ(32) ಸೋಮವಾರ ಬೆಳಗ್ಗೆ ಗುರುಪುರ ಸೇತುವೆಯಿಂದ ಜಿಗಿದು ಆತ್ಮಹತ್ಯೆಗೈದಿದ್ದಾರೆ.

ಕೆಲ ಸಮಯ ಗಂಜಿಮಠ ಜಂಕ್ಷನ್‌ನಲ್ಲಿ ಫಾಸ್ಟ್‌ಫುಡ್ ಗೂಡಂಗಡಿ ನಡೆಸುತ್ತಿದ್ದ ಅವರು ಪತ್ನಿಯೊಂದಿಗೆ ಗಂಜಿಮಠ-ಮಳಲಿ ಕ್ರಾಸ್ ಬಳಿ ವಾಸ್ತವ್ಯ ಹೂಡಿದ್ದರು. ಸೋಮವಾರ ಬೆಳಗ್ಗೆ ಕೈಕಂಬದಿಂದ ಆಗಮಿಸಿದ ಅವರು ಸೇತುವೆ ಮೇಲೆ ಸ್ಕೂಟರ್ ಇಟ್ಟು ನದಿಗೆ ಹಾರಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಕೌಟುಂಬಿಕ ಕಲಹದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಸಂಶಯಿಸಲಾಗಿದೆ. ಸ್ಥಳೀಯರ ಸಹಕಾರದಿಂದ ಬಜ್ಪೆ ಪೊಲೀಸರು ಶವ ಪತ್ತೆ ಕಾರ್ಯ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net