ಆಟೋ ಪಲ್ಟಿಯಾಗಿ ಮೂವರಿಗೆ ಗಾಯ

28bnk1 web
Published on

ಬಣಕಲ್: ದಾಸರಹಳ್ಳಿಯಲ್ಲಿ ಭಾನುವಾರ ರಸ್ತೆಗೆ ಅಡ್ಡಬಂದ ಕಾಡುಹಂದಿಯನ್ನು ತಪ್ಪಿಸಲು ಹೋಗಿ ಆಟೋ ಪಲ್ಟಿಯಾಗಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮತ್ತಿಕಟ್ಟೆಯಿಂದ ಬಣಕಲ್ ಕಡೆಗೆ ಬರುತ್ತಿದ್ದ ಆಟೋಗೆ ದಾಸರಹಳ್ಳಿ ಸಮೀಪ ಕಾಡುಹಂದಿ ಅಡ್ಡಬಂದಿದ್ದು ತಪ್ಪಿಸಲು ಹೋಗಿ ರಸ್ತೆ ಬದಿಗೆ ಆಟೋ ಪಲ್ಟಿಯಾಗಿದೆ. ಕೂಲಿಕಾರ್ವಿುಕರಾದ ಪ್ರೇಮಾ, ಶಾರದಾ, ಅಪ್ಪಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮೂಡಿಗೆರೆ ಎಂಜಿಎಂ ಆಸ್ಪತ್ರೆ ಬಳಿಕ ಚಿಕ್ಕಮಗಳೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅರಣ್ಯ ಅಧಿಕಾರಿಗಳು ಸ್ಥಳ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net