ಆಟೋ ಚಾಲಕರ ಸಂಘದಿಂದ ಮನವಿ

h29-SMK
Published on

ಹುಬ್ಬಳ್ಳಿ: ಕೂಲಿ ಕಾರ್ವಿುಕರು ಅತಿ ಹೆಚ್ಚು ವಾಸವಾಗಿರುವ ಎಸ್.ಎಂ. ಕೃಷ್ಣ ನಗರದಲ್ಲಿ ಬಡ ಮಕ್ಕಳ ಶೈಕ್ಷಣಿಕ ಅನುಕೂಲಕ್ಕಾಗಿ ಪ್ರೌಢಶಾಲೆ ಆರಂಭಿಸುವಂತೆ ಒತ್ತಾಯಿಸಿ ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ಆಟೋ ಚಾಲಕರ ಸಂಘದ ಸದಸ್ಯರು ಮನವಿ ಸಲ್ಲಿಸಿದರು.

ಆರ್ಥಿಕವಾಗಿ ಹಿಂದುಳಿದ ಜನರೇ ಅತಿ ಹೆಚ್ಚು ವಾಸವಾಗಿದ್ದಾರೆ. ಇಲ್ಲಿರುವ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಈ ಭಾಗದ ಮಕ್ಕಳಿಗೆ ಕೇವಲ 8ನೇ ತರಗತಿವರೆಗೆ ಮಾತ್ರ ಶಿಕ್ಷಣ ಸಿಗುತ್ತಿದೆ. ಹೆಚ್ಚಿನ ಶಿಕ್ಷಣಕ್ಕಾಗಿ ದೂರದ ಶಾಲೆಗಳಿಗೆ ತೆರಳಬೇಕಿದೆ. ಇದರಿಂದ ಅನೇಕ ಮಕ್ಕಳು ಪ್ರೌಢಶಾಲಾ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಕೂಡಲೆ, ಇಲ್ಲಿರುವ ಉರ್ದು ಪ್ರಾಥಮಿಕ ಶಾಲೆಯನ್ನು ಉನ್ನತೀಕರಿಸಿ ಪ್ರೌಢಶಾಲೆ ಆರಂಭಿಸಿ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸದಸ್ಯರು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಶಾಸಕ ಪ್ರಸಾದ ಅಬ್ಬಯ್ಯ, ಕೂಡಲೆ, ಸರ್ಕಾರಕ್ಕೆ ಪತ್ರ ಬರೆದು ಎಸ್.ಎಂ. ಕೃಷ್ಣ ನಗರದಲ್ಲಿ ಪ್ರೌಢಶಾಲೆ ಆರಂಭಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸಂಘದ ಅಧ್ಯಕ್ಷ ದಾದಾಪೀರ ಬೇಪಾರಿ, ಖಾಸಿಂಸಾಬ್ ಗುಡೇನವರ, ಅಬ್ದುಲ್ ಹಕೀಂ ಮುಲ್ಲಾ, ಮೈನುದ್ದೀನ್ ಮುಚಾಲೆ, ಮಹ್ಮದ್ ಧಾರವಾಡ, ರಾಜೇಸಾಬ್ ಮಕಾಂದಾರ, ಮನಸೂರ ಸೋನಾರ, ಮೆಹಬೂಬ್ ಅತ್ತಾರ, ಗೌಸ್​ವೋದಿನ್ ಪಾನವಾಲೆ, ಹಸನಸಾಬ್ ಶಿರಹಟ್ಟಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net