ಆಟೋ ಚಾಲಕನ ಸಾವಿನ ತನಿಖೆಯಾಗಲಿ

26Koppa01 web
Published on

ಕೊಪ್ಪ: ಕಳೆದ ವಾರ ಕೊಪ್ಪದಲ್ಲಿ ಸಾವಿಗೀಡಾದ ಆಟೋ ಚಾಲಕ ಪ್ರದೀಪ್ ಗೌಡ ಅವರ ಸಾವು ನಾಗರಿಕರಲ್ಲಿ ಅನುಮಾನ ಮೂಡಿಸುತ್ತಿದ್ದು, ಪ್ರಾಮಾಣಿಕ ತನಿಖೆಯಿಂದ ಕುಟುಂಬಕ್ಕೆ ನ್ಯಾಯ ದೊರಕಬೇಕಿದೆ ಎಂದು ಒತ್ತಾಯಿಸಿ ಜೆಡಿಎಸ್ ಕಾರ್ಯಕರ್ತರು ಡಿವೈಎಸ್​ಪಿ ಗುಂಜನ್ ಆರ್ಯ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಪೊಲೀಸ್ ಇಲಾಖೆ ಪ್ರಾಮಾಣಿಕ ತನಿಖೆ ಕೈಗೊಂಡು ಸಾರ್ವಜನಿಕರಲ್ಲಿ ಮನೆ ಮಾಡಿದ ಸಂಶಯ ದೂರ ಮಾಡಬೇಕಿದೆ. ಅಪರಾಧಿಗಳು ಯಾರೇ ಆಗಿದ್ದರೂ, ಎಷ್ಟೇ ಪ್ರಭಾವಿಗಳಾಗಿದ್ದರೂ ಬಂಧಿಸಬೇಕು. ತನಿಖೆ ವಿಳಂಬವಾದಲ್ಲಿ ಸಾಕ್ಷಿ ನಾಶ ಸಂಭವ ಹಾಗೂ ಊರಿನ ಶಾಂತಿ ಕದಡುವ ಸಾಧ್ಯತೆ ಇರುವುದರಿಂದ ಶೀಘ್ರವಾಗಿ ತನಿಖೆ ನಡೆಯಬೇಕು. ಮೃತನ ಕುಟುಂಬಕ್ಕೆ ಪರಿಹಾರ ನೀಡಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net