ಆಟೋ ಚಾಲಕನ ಶವ ಮುಸುರೆಹಳ್ಳದಲ್ಲಿ ಪತ್ತೆ

21 koppa 1 web
Published on

ಕೊಪ್ಪ: ನಾಪತ್ತೆಯಾಗಿದ್ದ ಪಟ್ಟಣದ ಜೆ.ಎಂ.ಜೆ. ಆಟೋ ನಿಲ್ದಾಣದ ಆಟೋ ಚಾಲಕ ಪ್ರದೀಪ್ (36) ಮೃತದೇಹ ಕೆಸವೆಯಲ್ಲಿ ರಸ್ತೆಯಲ್ಲಿರುವ ಮುಸುರೆ ಹಳ್ಳದಲ್ಲಿ ಭಾನುವಾರ ಮಧ್ಯಾಹ್ನ ಪತ್ತೆಯಾಗಿದೆ. ಯುವಕನನ್ನು ಕೊಲೆ ಮಾಡಿರಬಹುದೆಂಚಿ ಶಂಕೆ ವ್ಯಕ್ತವಾಗಿದೆ.

ಶುಕ್ರವಾರ ರಾತ್ರಿ ಪ್ರದೀಪ್ ಅವರ ಆಟೋ ಮುಸುರೆಹಳ್ಳದ ಸೇತುವೆ ಮೇಲೆ ನಿಂತಿತ್ತು. ಪ್ರದೀಪ್ ಇಲ್ಲದಿದ್ದರಿಂದ ಸಹೋದರ ಪ್ರವೀಣ್ ಪಟ್ಟಣ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದರು. ಪ್ರಕರಣ ಹಿನ್ನೆಲೆಯಲ್ಲಿ ಪೊಲೀಸರು ಅನ್ಯಕೋಮಿನ ಇಬ್ಬರು ಯುವಕರನ್ನು ವಿಚಾರಣೆಗೆ ಒಳಪಡಿಸಿದ್ದರು ಎಂದು ತಿಳಿದುಬಂದಿದೆ.

ಭಾನುವಾರ ಪ್ರದೀಪ್ ಮೃತದೇಹ ಪತ್ತೆಯಾಗುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಆಟೋ ಚಾಲಕರು ಪೊಲೀಸ್ ಠಾಣೆ ಮುಂಭಾಗ ಜಮಾಯಿಸಿ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದರು.

ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ಗೌರವಾಧ್ಯಕ್ಷ ಎಚ್.ಆರ್.ಜಗದೀಶ್ ವಿಜಯವಾಣಿಯೊಂದಿಗೆ ಮಾತನಾಡಿ, ಇದು ಸಹಜವಾದ ಸಾವಲ್ಲ. ಪೊಲೀಸ್ ಇಲಾಖೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ಆತನ ಕೊಲೆಯಾಗಿರಬಹುದು ಎಂಬ ಅನುಮಾನವಿದೆ. ಇಂಥ ಘಟನೆಗಳಿಂದ ಆಟೋ ಚಾಲಕರಲ್ಲಿ ಭಯದ ವಾತಾವರಣ ನಿರ್ವಣವಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net