

ಚಾಮರಾಜನಗರ : ಹನೂರು ತಾಲೂಕಿನ ಕುರುಬರ ದೊಡ್ಡಿ ಗ್ರಾಮ ಸಮೀಪದ ಮುಖ್ಯ ರಸ್ತೆಯಲ್ಲಿ ಬುಧವಾರ ನಿಯಂತ್ರಣ ತಪ್ಪಿದ ಪರಿಣಾಮ ಪ್ಯಾಸೆಂಜರ್ ಆಟೋ ಮಗುಚಿ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ತಾಲೂಕಿನ ಕೌದಳ್ಳಿ ಗ್ರಾಮದ ಚಿನ್ನರಾಜು ಎಂಬವರ ಮಗ ದಾಸಪ್ಪ (45) ಮೃತ.
ಈತ ಕೊಳವೆ ಬಾವಿಯ ಮೋಟಾರ್ ಅನ್ನು ರಿಪೇರಿ ಮಾಡಿಸಲು ಬೆಳಗ್ಗೆ 9 ರಲ್ಲಿ ಆಟೋ ಚಾಲನೆ ಮಾಡಿಕೊಂಡು ರಾಮಾಪುರದಿಂದ ಹನೂರಿಗೆ ಆಗಮಿಸುತ್ತಿದ್ದನು. ಈ ವೇಳೆ ನಿಯಂತ್ರಣ ತಪ್ಪಿದ ಪರಿಣಾಮ ಆಟೋ ಮಗುಚಿ ಸ್ಥಳದಲ್ಲಿಯೇ ಮೃತಪಟ್ಟನು. ಸುದ್ದಿ ತಿಳಿದು ಸ್ಥಳಕ್ಕೆ ಇನ್ಸ್‌ಪೆಕ್ಟರ್ ನಂಜುಂಡಸ್ವಾಮಿ ಆಗಮಿಸಿ ಪರಿಶೀಲಿಸಿ ಮಹಜರ್ ನಡೆಸಿದರು. ಬಳಿಕ ರಾಮಾಪುರ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರಿಗೆ ನೀಡಲಾಯಿತು. ಈ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.