ಆಟದ ಜತೆಗೆ ಓದು, ಬರಹಕ್ಕೂ ಇರಲಿ ಆದ್ಯತೆ

19CBP4DC
Published on

ಚಿಕ್ಕಬಳ್ಳಾಪುರ: ಮಕ್ಕಳು ಆಟದ ಜತೆಗೆ ಪಾಠಕ್ಕೂ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಆರ್.ಲತಾ ಸಲಹೆ ನೀಡಿದರು.

ನಗರದ ಮಕ್ಕಳ ಜಿಲ್ಲಾ ಗ್ರಂಥಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಕ್ಕಳಿಗಾಗಿ ಓದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಗ್ರಂಥಾಲಯದಲ್ಲಿ ಹೆಚ್ಚಿನ ಜ್ಞಾನಾರ್ಜನೆಗೆ ಸಹಕಾರಿಯಾಗುವ ಪುಸ್ತಕಗಳಿವೆ. ದೇಶದ ಮೊದಲ ಪ್ರಧಾನಿ ಜವಾಹಾರ್‌ಲಾಲ್ ನೆಹರೂ ಮತ್ತು ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯನವರಿಂದ ಉದ್ಘಾಟನೆ ಕಂಡ ಗ್ರಂಥಾಲಯ ಕಟ್ಟಡವನ್ನು ಮಕ್ಕಳ ಪ್ರತ್ಯೇಕ ಗ್ರಂಥಾಲಯವನ್ನು ಪರಿವರ್ತಿಸಲಾಗಿದೆ. ಮಕ್ಕಳ ಓದಿಗೆ ಅನುಕೂಲವಾಗಿದೆ ಎಂದರು.

ಮಕ್ಕಳೊಂದಿಗೆ ಕೆಲಕಾಲ ಸಮಯ ಕಳೆದ ಡಿಸಿ ಕಿರು ಸಂವಾದ ನಡೆಸಿದರು. ಬಳಿಕ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗಾಗಿ ಸಂಪನ್ಮೂಲ ವ್ಯಕ್ತಿಗಳಿಂದ ಮಾರ್ಗದರ್ಶನ ನೀಡಲು ಗುರುತಿಸಿರುವ ಸಭಾಂಗಣವನ್ನು ವೀಕ್ಷಿಸಿದರು.

ಜಿಲ್ಲಾ ಪೊಲೀಸ್ ಜಿ.ಕೆ.ಮಿಥುನ್ ಕುಮಾರ್, ಜಿಲ್ಲಾ ಮುಖ್ಯ ಗ್ರಂಥಾಲಯಾಧಿಕಾರಿ ಎಂ.ಶಂಕರಪ್ಪ, ಸಾಹಿತಿ ಡಾ ಪ್ರಭಾ ನಾರಾಯಣಗೌಡ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net