ಆಚಾರ್ಯ ಕುಟೀರದಲ್ಲಿ ದಸರಾಕ್ಕೆ ಚಾಲನೆ

11111
Published on

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ನಗರದ ಚೆನ್ನಪ್ಪ ಬಡಾವಣೆಯಲ್ಲಿನ ಆಚಾರ್ಯ ಕುಟೀರದಲ್ಲಿ ಆಯೋಜಿಸಿದ್ದ 6ನೇ ನವರಾತ್ರಿ ಉತ್ಸವಕ್ಕೆ ನಗರಸಭೆ ಅಧ್ಯಕ್ಷೆ ಎನ್.ಎಸ್.ಪೂರ್ಣಿಮಾ ಸುಗ್ಗರಾಜು ಚಾಲನೆ ನೀಡಿದರು.
ಆಚಾರ್ಯ ಶ್ರೀ ವಿಜಯಕುಮಾರ ಗುರೂಜಿ ಸಾನ್ನಿಧ್ಯದಲ್ಲಿ ಸಿಂಹಾರೂಢ ಶ್ರೀ ಚಾಮುಂಡೇಶ್ವರಿ ದೇವಿ ವಿಗ್ರಹ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುವ ಮೂಲಕ ನವರಾತ್ರಿ ಆಚರಣೆ ಆರಂಭಿಸಿದರು.
ತಾಯಿ ಚಾಮುಂಡೇಶ್ವರಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಮಾಡಿದ ಬಳಿಕ ನಾಡದೇವಿಯ ಮುಂಭಾಗದಲ್ಲಿ ಗಣಹೋಮ, ಕಾಲಬೈರವೇಶ್ವರ ಹಾಗೂ ಪ್ರಧಾನ ದುರ್ಗಾಹೋಮ ನೆರವೇರಿಸಿ ಪೂರ್ಣಾಹುತಿ ನೀಡಲಾಯಿತು. ನವರಾತ್ರಿ ಆರಂಭದ ದಿನ ದುರ್ಗಾದೇವಿ ಅಂತರ್ಗತ ಶೈಲಪುತ್ರಿಯ ಆವಾಹನೆ ಮಾಡಿ ಪೂಜೆ ಸಲ್ಲಿಸಲಾಯಿತು.


ವಿವಿಧ ದೇವರಿಗೆ ಪೂಜೆ:
ನವರಾತ್ರಿ ಆಚರಣೆ ಪ್ರಯುಕ್ತ ಕುಟೀರದಲ್ಲಿ ಶಕ್ತಿಯ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ಜತೆಗೆ ಗೌರಿ, ಲಕ್ಷ್ಮೀ, ಸರಸ್ವತಿ ದುರ್ಗಾದೇವಿ ಸೇರಿ ಗಣೇಶ, ಕಾಲಬೈರವೇಶ್ವರ, ಆಂಜನೇಯ, ಶ್ರೀದೇವಿ, ಭೂದೇವಿ ಸಮೇತ ಶ್ರೀಲಕ್ಷ್ಮೀವೆಂಕಟೇಶ್ವರ ದೇವರನ್ನು ಪ್ರತಿಷ್ಠಾಪಿಸಿದ್ದು, ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.
ನಗರಸಭೆ ನಿಕಟಪೂರ್ವ ಅಧ್ಯಕ್ಷೆ ಲತಾ ಹೇಮಂತ್ ಕುಮಾರ್, ಸದಸ್ಯ ಎನ್.ಗಣೇಶ್, ಸಿ.ಪ್ರದೀಪ್, ನೆ.ಯೋ.ಪ್ರಾಧಿಕಾರ ಮಾಜಿ ಅಧ್ಯಕ್ಷ ಎನ್.ಪಿ.ಹೇಮಂತ್ ಕುಮಾರ್, ನವರಾತ್ರಿ ಆಚರಣಾ ಸಮಿತಿ ಅಧ್ಯಕ್ಷ ಎಂ.ಎನ್.ಹರೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಸೊಂಡೇಕೊಪ್ಪ ರಮೇಶ್, ಖಜಾಂಚಿ ಮಂಜುನಾಥ್, ಸಹ ಕಾರ್ಯದರ್ಶಿ ವೃಕ್ಷ ಮಹೇಶ್, ಸದಸ್ಯ ಪ್ರಮೋದ್ ಕುಮಾರ್, ಪುರೋಹಿತ ಸುದರ್ಶನ್, ಶ್ರೀನಾಥ್, ಪುರಸಭೆ ಮಾಜಿ ಸದಸ್ಯ ಅರುಣ್ ಕುಮಾರ್ ಇದ್ದರು.

ದೇಗುಲಗಳಲ್ಲಿ ನವರಾತ್ರಿ ಆರಂಭ: ನಗರದ ಪೇಟೆಯಲ್ಲಿನ ರಾಜರಾಜೇಶ್ವರ ಹಾಗೂ ಕನ್ನಕಾಪರಮೇಶ್ವರ ದೇಗುಲಗಳಲ್ಲಿ ನವರಾತ್ರಿ ಆಚರಣೆಗೆ ಚಾಲನೆ ದೊರೆತಿದ್ದು, ದೇವರಿಗೆ ವಿಶೇಷ ಅಭಿಷೇಕ, ಅಲಂಕಾರ, ಪೂಜಾದಿಗಳನ್ನು ನೆರವೇರಿಸಲಾಯಿತು. ರಾಜರಾಜೇಶ್ವರಿ ದೇಗುಲದಲ್ಲಿ ಮಹಿಳೆಯರು ಗಥಾಸಪ್ತಶತಿ ಪಾರಾಯಣ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net