ಆಘಾತ ತಾಳದೆ ಪ್ರಾಣಬಿಟ್ಟ ಚಿಕ್ಕಪ್ಪ!

20 ron 2b
Published on

ರೋಣ: ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಅಣ್ಣನ ಮಗ ಸಾವನ್ನಪ್ಪಿದ ಸುದ್ದಿ ತಿಳಿದ ಆತನ ಚಿಕ್ಕಪ್ಪ ಹೃದಯಾಘಾತದಿಂದ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ತಾಲೂಕಿನ ಪ್ರವಾಹ ಪೀಡಿತ ನವಗ್ರಾಮ ಗಾಡಗೋಳಿಯಲ್ಲಿ ಶನಿವಾರ ರಾತ್ರಿ ನಡೆದಿದೆ.

ಗ್ರಾಮಕ್ಕೆ ನೀರು ಸರಬುರಾಜು ಮಾಡುವ ಬೋರ್​ವೆಲ್​ನ ಮೋಟಾರ್ ಸ್ಟಾರ್ಟ್ ಮಾಡುವ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಪ್ರವೀಣ ಶಿವರಾಯಪ್ಪ ಚಲವಾದಿ (29) ಸಾವನ್ನಪ್ಪಿದ್ದಾನೆ. ಸುದ್ದಿ ಕೇಳಿದ ಅವರ ಚಿಕ್ಕಪ್ಪ ಕುಬೇರಪ್ಪ ಹೊಸಮನಿ (65) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ಕುರಿತು ರೋಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರು ಸದಸ್ಯರನ್ನು ಒಂದೇ ದಿನ ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net