ಆಗಾಗ್ಗೆ ಆರೋಗ್ಯ ತಪಾಸಣೆ ಮಾಡಿಕೊಳ್ಳಿ

ydg03
Published on

ಗುರುಮಠಕಲ್: ಶುಚಿತ್ವ ಮತ್ತು ಇತ್ತೀಚಿನ ಆಹಾರ ಪದ್ಧತಿಯಿಂದ ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಹೀಗಾಗಿ ಆಗಾಗ್ಗೆ ಆರೋಗ್ಯದ ತಪಾಸಣೆ ಮಾಡಿಕೊಳ್ಳಬೇಕು ಎಂದು ಸ್ವಾಮಿ ವಿವೇಕಾನಂದ ಸೇವಾ ಸಂಘದ ವೈದ್ಯಾಧಿಕಾಡಿ ಡಾ.ಚೇತನ ಹೇಳಿದರು.

ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗ ಮತ್ತು ವಿವೇಕಾನಂದ ಸೇವಾಶ್ರಮದ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡ ಉಚಿತ ನೇತ್ರ ತಪಾಸಣಾ ಮತ್ತು ಶಸ್ತç ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದ ಅವರು, ಬಿಪಿ ಮತ್ತು ಮಧುಮೇಹ ಕಾಯಿಲೆಯಿಂದ ಬಳಲುವವರಿಗೆ ಹೆಚ್ಚಾಗಿ ಕಣ್ಣಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಮೇಲಿಂದ ಮೇಲೆ ಆರೋಗ್ಯ ತಪಾಸಣೆ ಮಾಡಿಕೊಂಡು ವೈದ್ಯರ ಸಲಹೆ ಪಡೆಯಬೇಕು ಎಂದು ಹೇಳಿದರು.

ಈ ಶಿಬಿರ (ಶುಕ್ರವಾರ-ಶನಿವಾರ)ಎಡರು ದಿನ ಹಮ್ಮಿಕೊಂಡಿದ್ದು, ಇದರಲ್ಲಿ ಭಾಗವಹಿಸುವವರಿಗೆ ಉಚಿತವಾಗಿ ತಪಾಸಣೆ ಜತೆಗೆ ಅಗತ್ಯವಿದ್ದರೆ ಕಣ್ಣಿನ ಶಸ್ತç ಚಿಕಿತ್ಸೆ ಮಾಡಲಾಗುವುದು ಎಂದರು.

ಡಿಎಚ್‌ಒ ಪ್ರಭುಲಿಂಗ ಮಾನಕರ ಮಾತನಾಡಿ, ವಿವೇಕಾನಂದ ಸೇವಾಶ್ರಮದ ಕಾರ್ಯ ಶ್ಲಾಘನೀಯ ಎಂದರು. ಖಾಸಾಮಠದ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ಜಂಟಿ ಕಾರ್ಯದರ್ಶಿ ಸಂತೋಷ ನೀರೆಟಿ, ಆರ್‌ಸಿಎಚ್ ಅಧಿಕಾರಿ ಡಾ.ಮಲ್ಲಪ್ಪ ನಾಯ್ಕಲ್, ತಾಲೂಕು ವೈದ್ಯಾಧಿಕಾರಿ ಡಾ.ಹಣಮಂತರೆಡ್ಡಿ, ವೈದ್ಯಾಧಿಕಾರಿ ಡಾ.ಶಿವಪ್ರಸಾದ ಮೈತ್ರಿ, ಡಾ.ಚೇತನ ಸಂಗನಕರ್, ಡಾ.ಗೋಪಾಲಕೃಷ್ಣ, ಡಾ.ಮಹೇಶ ಸಜ್ಜನ್, ಹರೀಶ, ಆರೋಗ್ಯ ಮಿತ್ರ ಕಾರ್ತಿಕ ಗೌಡ, ರಾಕೇಶ, ಪ್ರಶಾಂತ ಇತರರಿದ್ದರು.
ನಿವೃತ್ತ ವೈದ್ಯಾಧಿಕಾರಿ ಡಾ.ವಿ.ಸಿ.ಮೈತ್ರಿ ಶಿಬಿರಾರ್ಥಿಗಳಿಗೆ ವಸತಿ ಮತ್ತು ಊಟದ ವ್ಯವಸ್ಥೆ ಕಲ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net