ಆಕ್ಸಿಜನ್ ಕಿಟ್ ಸಮೇತ ಮಗು ಹೊತ್ತೊಯ್ದ ತಂದೆ

KIMS 11 (17)
Published on

ಹುಬ್ಬಳ್ಳಿ: ಅನಾರೋಗ್ಯದಿಂದ ಬಳಲುತ್ತಿದ್ದ ಮಗುವಿಗೆ ನೀಡಲಾಗಿದ್ದ ಆಕ್ಸಿಜನ್ ಕಿಟ್ ಸಮೇತ ತಂದೆಯೊಬ್ಬರು ಹೊತ್ತೊಕೊಂಡೇ ಬೇರೆ ವಾರ್ಡ್​ಗೆ ಒಯ್ದ ಘಟನೆ ಇಲ್ಲಿನ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಕಿಮ್್ಸ) ಬೆಳಕಿಗೆ ಬಂದಿದೆ. ಇಲ್ಲಿನ ಸಿಬ್ಬಂದಿ ಸ್ಟ್ರೆಚರ್ ನೀಡಿರಲಿಲ್ಲ. ಇದರಿಂದ ನೊಂದ ತಂದೆ ತನ್ನ ಮಗುವನ್ನು ಬೇರೆ ವಾರ್ಡ್​ಗೆ ಹೊತ್ತೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಇದರ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಇಲ್ಲಿದ್ದ ಸಿಬ್ಬಂದಿ ಇದನ್ನು ನೋಡುತ್ತ ನಿಂತಿದ್ದರೆ ಹೊರತು ಸಹಾಯಕ್ಕೆ ಧಾವಿಸಲಿಲ್ಲ ಎಂಬ ಆರೋಪ ವ್ಯಕ್ತವಾಗಿದೆ. ಕರೊನಾ ಸೇನಾನಿಗಳು ಚಿಕಿತ್ಸೆ ನೀಡಿ ಸೋಂಕಿತರನ್ನು ಗುಣವಾಗಿಸುವಲ್ಲಿ ಈಗಾಗಲೇ ಹೆಸರು ಮಾಡಿದ್ದಾರೆ. ಆದರೂ ಇಂಥ ಘಟನೆಯಿಂದ ಕಪ್ಪುಚುಕ್ಕೆ ಮೆತ್ತಿಕೊಳ್ಳುವಂತಾಗಿದೆ. ಕೂಡಲೆ ಇಂಥ ಅವ್ಯವಸ್ಥೆ ಸರಿಪಡಿಸುವ ಕೆಲಸವನ್ನು ಆಡಳಿತ ಮಂಡಳಿ ಮಾಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net