

ಕಲಬುರಗಿ: ಆಕಾಶ ಎಜ್ಯುಕೇಷನ್ ಸರ್ವಿಸಸ್ ಲಿಮಿಟೆಡ್ ವಿದ್ಯಾರ್ಥಿವೇತನಕ್ಕಾಗಿ ರಾಷ್ಟಿçÃಯ ಪ್ರತಿಭಾನ್ವೇಷಣೆ ಪರೀಕ್ಷೆಯೂ (ಆಕಾಶ ನ್ಯಾಷನಲ್ ಟ್ಯಾಲೆಂಟ್ ಹಂಟ್ ಎಕ್ಸಾಂ-ಅAಥೆ) ಅ.೧೯ರಿಂದ ೨೭ರವರೆಗೆ ನಡೆಯಲಿದೆ ಎಂದು ಆಕಾಶ ಎಜುಕೇಶನಲ್ ಸರ್ವೀಸಸ್ ಲಿಮಿಟೆಡ್‌ನ ಸ್ಥಳೀಯ ಘಟಕದ ಸಹಾಯಕ ನಿರ್ದೇಶಕ ರವಿಕುಮಾರ ಹೇಳಿದರು
೧೫ನೇ ವರ್ಷದ ಪ್ರತಿಭಾನ್ವೇಷಣೆ ಪರೀಕ್ಷೆ ನಡೆಯುತ್ತಿದ್ದು, ೭ರಿಂದ ೯ನೇ ತರಗತಿಯ ಟಾಪ್ ೧೦ ಮತ್ತು ೧೧ರಿಂದ ೧೨ನೇ ತರಗತಿಯ ಟಾಪ್ ೫೦ ವಿದ್ಯಾರ್ಥಿಗಳಿಗೆ ಶೇ.೧೦೦ ವಿದ್ಯಾರ್ಥಿ ವೇತನ ದೊರೆಯಲಿದೆ. ಐವರು ವಿದ್ಯಾರ್ಥಿಗಳಿಗೆ ಫ್ಲೋಡಿರಾಡದಲ್ಲಿನ ಕೆನಡಿ ಸ್ಪೆಸ್ ಸೆಂಟರ್‌ಗೆ ಐದು ದಿನದ ಉಚಿತ ಪ್ರವಾಸ ಕೈಗೊಳ್ಳುವ ಅವಕಾಶ ಒದಗಿಸಲಾಗುತ್ತದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆಫ್‌ಲೈನ್‌ನಲ್ಲಿ ಪರೀಕ್ಷೆ ದೇಶಾದ್ಯಂತ ಆಕಾಶ ಸಂಸ್ಥೆಯ ೩೧೫ಕ್ಕೂ ಹೆಚ್ಚು ಕೇಂದ್ರಗಳಲ್ಲಿ ನಡೆಯಲಿದೆ. ಆಸಕ್ತ ವಿದ್ಯಾರ್ಥಿಗಳು ಆನ್‌ಲೈನ್ ಪರೀಕ್ಷೆಗಿಂತ ಮೂರು ದಿನ ಮೊದಲು, ಆಫ್‌ಲೈನ್ ಪರೀಕ್ಷೆ ಆರಂಭದ ಏಳು ದಿನ ಮೊದಲು ನೋಂದಾಯಿಸಿಕೊಳ್ಳಬೇಕು ಎಂದು ಹೇಳಿದರು.
೨೦೦ ರೂ. ಪ್ರವೇಶ ಶುಲ್ಕವಿದೆ. ಆಫ್‌ಲೈನ್ ಪರೀಕ್ಷೆ ಅ.೨೦ ಮತ್ತು ೨೭ರಂದು ನಡೆಯಲಿವೆ. ಆನ್‌ಲೈನ್ ಪರೀಕ್ಷೆ ೧೯ರಿಂದ ೨೭ರವರೆಗೆ ನಡೆಯಲಿವೆ. ಒಂದು ಗಂಟೆ ಅವಧಿಯಿದ್ದು, ೯೦ ಅಂಕ ಹೊಂದಿದೆ. ನ.೧೬ರಂದು ವೆಬ್‌ಸೈಟ್‌ನಲ್ಲಿ ಫಲಿತಾಂಶ ಬರಲಿದೆ ಎಂದು ಹೇಳಿದರು.
ವರುಣ ಸೋನಿ, ರಾಜೇಶ ಇತರರಿದ್ದರು.