

ಕಲಬುರಗಿ: ದಿಲ್ಲಿ ಮೂಲದ ಮ್ಯಾಜಿಕ್ ಬುಕ್ ಆಫ್ ರೆಕಾರ್ಡ್ ಸಂಸ್ಥೆ ಕೊಡುಮಾಡುವ ಬೆಸ್ಟ್ ಅಚಿವರ್ ಪ್ರಶಸ್ತಿಗೆ ಕಲಬುರಗಿಯ ಬಹುಮುಖ ಪ್ರತಿಭೆ ಆಕಾಂಕ್ಷಾ ಪ್ರಮೋದ ಪುರಾಣಿಕ್ ಭಾಜನರಾಗಿದ್ದಾರೆ. ಸಂಗೀತ, ಕ್ರೀಡೆ ಮತ್ತು ಸಾಂಸ್ಕೃತಿಕ ಲೋಕದ ಅನೇಕ ವಿಭಾಗಗಳಲ್ಲಿ ಸಾಧನೆಗಾಗಿ ಆಕಾಂಕ್ಷಾ ಈ ಪ್ರಶಸ್ತಿ ಗಿಟ್ಟಿಸಿದ್ದಾರೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಳೆದ ವರ್ಷ ಹಮ್ಮಿಕೊಂಡಿದ್ದ ಸಿತಾರ್ ವಾದನದಲ್ಲಿ ಆಕಾಂಕ್ಷಾ ರಾಷ್ಟçಮಟ್ಟಕ್ಕೆ ಆಯ್ಕೆಯಾಗಿದ್ದರು. ಪದವಿಪೂರ್ವ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದು ರಾಷ್ಟç ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಟೈಕೊಂಡೊ ಹಾಗೂ ಕಿಕ್ ಬಾಕ್ಸಿಂಗ್‌ನಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.