ಆಕಳ ಕರುವಿಗೆ ಕೋವಿಡ್ ನಾಮಕರಣ

18KWR6
Published on

ಭಟ್ಕಳ: ಮಾರಣಾಂತಿಕ ಕರೊನಾ ಸೋಂಕಿಗೆ ಜಗತ್ತು ತಲ್ಲಣಿಸುತ್ತಿರುವುದರ ನಡುವೆಯೇ ಭಟ್ಕಳದಲ್ಲಿ ಹೊಸದಾಗಿ ಹುಟ್ಟಿದ ಕರು ಒಂದಕ್ಕೆ ‘ಕೋವಿಡ್’ ಎಂದು ನಾಮಕರಣ ಮಾಡಲಾಗಿದೆ. ತಾಲೂಕಿನ ಮಣ್ಕುಳಿಯಲ್ಲಿರುವ ನಾಗಾಯಕ್ಷೆ ಗೋಶಾಲೆಯಲ್ಲಿ ಆಕಳೊಂದು ಕರುವಿಗೆ ಜನ್ಮ ನೀಡಿದ್ದು ಗೋ ಶಾಲೆಯ ಮಾಲೀಕರಾದ ರಾಮದಾಸ ಪ್ರಭು ಈ ಕರುವಿಗೆ ಕೋವಿಡ್ ಎಂದು ನಾಮಕರಣ ಮಾಡಿದ್ದಾರೆ. ಕರೊನಾ ಬಗ್ಗೆ ಜನರು ಜಾಗೃತರಾಗಲಿ ಎನ್ನುವ ಆಶಯ ಇದರಲ್ಲಿದೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net