

ಚಿತ್ರದುರ್ಗ: ವಿಷಯಕ್ಕೆ ಅನುಗುಣವಾಗಿ ಆಕರ ಗ್ರಂಥಗಳನ್ನು ಪರಾಮರ್ಶಿಸುವಂತೆ ಬಾಪೂಜಿ ವಿದ್ಯಾಸಂಸ್ಥೆ ಅಧ್ಯಕ್ಷ ಎಸ್.ಸಂದೀಪ್ ಪ್ರಶಿಕ್ಷಣಾರ್ಥಿಗಳಿಗೆ ಸಲಹೆ ನೀಡಿದರು.
ನಗರದ ಶ್ರೀಮತಿ ಹೇಮಾವತಿ ಕುವೆಂಪು ಶಿಕ್ಷಣ ಮಹಾವಿದ್ಯಾಲಯದ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ರಂಗಸೌರಭ ರಂಗೋತ್ಸವ-2024 ಕನ್ನಡ ಗೀತಗಾಯನ, ಯೋಗ ತರಬೇತಿ ಮತ್ತು ಕವಿಕಾವ್ಯ ಪರಿಚಯ ಕಾರ‌್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಅನ್ನದ ಭಾಷೆಯಾಗಿದೆ. ಪ್ರಶಿಕ್ಷಣಾರ್ಥಿಗಳು ಸಾಹಿತ್ಯದೆಡೆ ಆಸಕ್ತಿ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ನೈಜ ಇತಿಹಾಸ ಅಧ್ಯಯನ, ಪಠ್ಯಾಧಾರಿತ ವಿಷಯಗಳೆಡೆ ಅರಿವು, ಸ್ಪಷ್ಟ ಓದು ಹಾಗೂ ಶುದ್ಧ ಬರವಣಿಗೆ ಅಗತ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಾಸ್ಯನಟ ಮೈಸೂರು ರಮಾನಂದ ಮಾತನಾಡಿ ಚಿತ್ರದುರ್ಗ ಅನೇಕ ನಟರು, ರಂಗಭೂಮಿ ಕಲಾವಿದರಿಗೆ ಬದುಕನ್ನು ಕಲ್ಪಿಸಿದೆ ಎಂದರು.
ರಂಗಸೌರಭ ಕಲಾ ಸಂಘದ ಅಧ್ಯಕ್ಷ ಡಾ.ಕೆ.ಮೋಹನ್‌ಕುಮಾರ್ ಮಾತನಾಡಿದರು. ಉಪನ್ಯಾಸಕರಾದ ಡಾ.ಪಿ.ರಾಧಮ್ಮ, ಡಾ.ಎಂ.ಎಸ್.ಲಕ್ಷ್ಮೀದೇವಿ, ಟಿ.ತಿಪ್ಪೇರುದ್ರಯ್ಯ, ಬಿ.ಪಾತಲಿಂಗಪ್ಪ, ಬಿ.ಹೇಮಲತಾ, ಎಂ.ಉಷಾಕಿರಣ, ರಂಗನಟ ಅಮಿತಾನಂದ, ಯೋಗಶಿಕ್ಷಕ ಎಂ.ಬಿ. ಮುರುಳಿ, ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ಇದ್ದರು.
ಪ್ರಶಿಕ್ಷಣಾರ್ಥಿ ಸಂತೋಷ ಡಿ.ಕಲಕಭಂಡಿ, ಡಾ.ಬಿ.ಎಲ್.ವೇಣು ಅವರ ಸಾಹಿತ್ಯವನ್ನು ಪರಿಚಯಿಸಿದರು. ಪ್ರಾಚಾರ‌್ಯ ಡಾ.ಜಿ.ದಾಸಯ್ಯ ಸ್ವಾಗತಿಸಿ, ಉಪನ್ಯಾಸಕಿ ಪೂಜಾ ರಜಪೂತ ವಂದಿಸಿದರು. ಪ್ರಶಿಕ್ಷಣಾರ್ಥಿಗಳಾದ ಸೌಮ್ಯಾ, ಐಶ್ವರ್ಯ, ಪಲ್ಲವಿ ಪ್ರಾರ್ಥಿಸಿದರು. ಆರ್.ಲಾವಣ್ಯ ನಿರೂಪಿಸಿದರು. ರಂಗಸೌರಭ ಕಲಾ ಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
----