ಆಂಬ್ಯುಲೆನ್ಸ್‌ನ ಟೈಯರ್ ಬ್ಲಾಸ್ಟ್:ತಪ್ಪಿದ ಅನಾಹುತ

ಆಂಬ್ಯುಲೆನ್ಸ್‌ನ ಟೈಯರ್ ಬ್ಲಾಸ್ಟ್:ತಪ್ಪಿದ ಅನಾಹುತ
Published on

ಹಾಸನ: ರೋಗಿಯನ್ನು ಕರೆ ತರುತ್ತಿದ್ದ 108 ಆಂಬ್ಯುಲೆನ್ಸ್‌ನ ಟೈಯರ್ ಬ್ಲಾಸ್ಟ್ ಆಗಿ ತುರ್ತು ಚಿಕಿತ್ಸಾ ವಾಹನ ರಸ್ತೆ ಬದಿಯ ಹಳ್ಳಕ್ಕೆ ಇಳಿದ ಘಟನೆ ನಗರದ ಹೊರ ವಲಯದ ಶ್ರೀರಾಮನಗರ ಬಳಿ ಸೋಮವಾರ ನಡೆದಿದೆ.
ಆಂಬ್ಯುಲೆನ್ಸ್‌ನಲ್ಲಿದ್ದ ರೋಗಿ ಸೇರಿ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸೊಮವಾರ ಬೆಳಗ್ಗೆ ಅರಕಲಗೂಡಿನಿಂದ ಹಾಸನಕ್ಕೆ ರೋಗಿ
ಯೊಬ್ಬರನ್ನು 108 ವಾಹನದಲ್ಲಿ ಕರೆತರಲಾಗುತ್ತಿತ್ತು. ಶ್ರೀರಾಮನಗರಬಳಿ ಬರುತ್ತಿದ್ದಂತೆಯೇ ಆಂಬ್ಯುಲೆನ್ಸ್ ವಾಹನದ ಟೈಯರ್ ಬ್ಲಾಸ್ಟ್ ಆಗಿದೆ. ಇದರಿಂದ ಚಾಲಕನ ನಿಯಂತ್ರಣ ತಪ್ಪಿ ತುರ್ತುವಾಹನ ರಸ್ತೆ ಬದಿಗೆ ಸರಿದಿದೆ. ಕೂಡಲೇಬೇರೊಂದು ಆಂಬ್ಯುಲೆನ್ಸ್ ಕರೆಸಿ ರೋಗಿಯನ್ನು ಆಸ್ಪತ್ರೆಗೆ ರವಾನೆಮಾಡಲಾಯಿತು. ಸ್ಥಳಕ್ಕೆ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net