ಆಂಬುಲೆನ್ಸ್​ಗಾಗಿ ಸೋಂಕಿತರ ಪರದಾಟ

h19-Railway Police st
Published on

ಹುಬ್ಬಳ್ಳಿ: ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಆವರಣದಲ್ಲಿರುವ ಕರ್ನಾಟಕ ರೈಲ್ವೆ ಪೊಲೀಸ್ ಠಾಣೆಯ ಇಬ್ಬರು ಎಎಸ್​ಐ ಹಾಗೂ ಒಬ್ಬರು ಪೇದೆಗೆ ಶನಿವಾರ ಬೆಳಗ್ಗೆಯೇ ಕರೊನಾ ಸೋಂಕು ದೃಢಪಟ್ಟಿದ್ದರೂ ಅವರನ್ನು ಕರೆದುಕೊಂಡು ಹೋಗಲು ಭಾನುವಾರ ಬೆಳಗಿನವರೆಗೂ ಆಂಬುಲೆನ್ಸ್ ಬಂದಿರಲಿಲ್ಲ.

ಸೋಂಕು ತಗುಲಿದೆ ಎಂದು ಗೊತ್ತಾದೊಡನೆ, ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ರೈಲ್ವೆ ಪೊಲೀಸರು ಹಲವಾರು ಬಾರಿ ಆಂಬುಲೆನ್ಸ್​ಗೆ ಕರೆ ಮಾಡಿದರೂ ಪ್ರಯೋಜನವಾಗಿರಲಿಲ್ಲ.

ರೈಲ್ವೆ ಪೊಲೀಸ್ ಠಾಣೆ ಪಕ್ಕದ ಉಡಾನ್ ಅಂತ್ಯೋದಯ ಕಲ್ಯಾಣ ಕೇಂದ್ರದ ಮೇಲ್ಭಾಗದಲ್ಲಿಯೇ ಈ ರೈಲ್ವೆ ಪೊಲೀಸರ ಕ್ವಾರ್ಟರ್ಸ್ ಇವೆ. ಅಲ್ಲಿ 35 ಜನ ಸಿಬ್ಬಂದಿ ಇದ್ದಾರೆ. ಆಂಬುಲೆನ್ಸ್ ಸಕಾಲದಲ್ಲಿ ಬಾರದೇ ಇದ್ದುದರಿಂದ ಸೋಂಕಿತರು ಟೆರೇಸ್ ಮೇಲೆ ಹೋಗಿ ಉಳಿದುಕೊಂಡಿದ್ದರು.

ಭಾನುವಾರ ಬೆಳಗ್ಗೆ ವಿಷಯ ತಿಳಿದ ಸುದ್ದಿಗಾರರು ಜಿಲ್ಲಾ ಆರೋಗ್ಯಾಧಿಕಾರಿಗೆ ಕರೆ ಮಾಡಿ ಕೇಳಿದ ನಂತರ ಆಂಬುಲೆನ್ಸ್ ಕಳಿಸುವುದಾಗಿ ಹೇಳಿದರು. ಮಧ್ಯಾಹ್ನ ರೈಲ್ವೆ ನಿಲ್ದಾಣದ ಆವರಣಕ್ಕೆ ಬಂದ ಆಂಬುಲೆನ್ಸ್, ಮೂವರು ಸೋಂಕಿತ ಪೊಲೀಸ್ ಸಿಬ್ಬಂದಿಯನ್ನು ಕರೆದುಕೊಂಡು ಹೋಯಿತು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net