

ಹನೂರು: ಹೆರಿಗೆಗಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಶುಕ್ರವಾರ ರಾತ್ರಿ ಶಾಗ್ಯ - ಹನೂರು ಮಾರ್ಗಮಧ್ಯೆ ಗರ್ಭಿಣಿಯೊಬ್ಬರು ತುರ್ತು ವಾಹನದಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಶಾಗ್ಯ ಗ್ರಾಮದ ಗೋವಿಂದ ಎಂಬುವರ ಪತ್ನಿ ಲಕ್ಷ್ಮೀ ಅವರಿಗೆ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಪಾಲಕರು 108 ತುರ್ತು ವಾಹನದಲ್ಲಿ ಕೊಳ್ಳೇಗಾಲ ಸರ್ಕಾರಿ ಉಪ ವಿಭಾಗೀಯ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಈ ವೇಳೆ ಈಕೆಗೆ ಮಾರ್ಗ ಮಧ್ಯೆ ಹೆರಿಗೆ ನೋವು ತೀವ್ರವಾದಾಗ ತುರ್ತು ವಾಹನದ ವೈದ್ಯಕೀಯ ಸಿಬ್ಬಂದಿ ಪಂದಯ್ಯ ಅವರು ಚಾಲಕ ಲಿಂಗರಾಜು ಸಹಕಾರದಿಂದ ಲಕ್ಷ್ಮೀ ಅವರಿಗೆ ಹೆರಿಗೆ ಮಾಡಿಸಿದ್ದು, ಹೆಣ್ಣು ಮಗುವಿನ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದು, ಶುಶ್ರೂಷೆಗಾಗಿ ಬಂಡಳ್ಳಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಗಿದೆ.