ಆಂಬುಲೆನ್ಸ್ ಉಚಿತ ಸೇವೆಗೆ ಚಾಲನೆ

8-kollegal-1,,,,
Published on

ಕೊಳ್ಳೇಗಾಲ: ಸಾರ್ವಜನಿಕರ ಉಚಿತ ಸೇವೆಗಾಗಿ ಪಟ್ಟಣದ ಜನನಿ ಆಸ್ಪತ್ರೆಗೆ ಮೈಸೂರಿನ ಬಿಜಿಎಸ್ ಅಪೊಲೋ ಆಸ್ಪತ್ರೆ

ನೀಡಿದ ಆಂಬುಲೆನ್ಸ್ ವಾಹನವನ್ನು ಶುಕ್ರವಾರ ಸಮರ್ಪಣೆ ಮಾಡಲಾಯಿತು. ಈ ಸಂದರ್ಭ ಮಾತನಾಡಿದ ಶಾಸಕ ಕೃಷ್ಣಮೂರ್ತಿ, ಸಿಎಸ್‌ಆರ್ ಅನುದಾನದಲ್ಲಿ 5 ಜಿ ಕನೆಕ್ಟೆಡ್ ಆಂಬುಲೆನ್ಸ್ ನೀಡಿರುವುದು ಮಾನವೀಯ ಸೇವಾಕಾರ್ಯವಾಗಿದೆ ಎಂದು ಶ್ಲಾಘಿಸಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ, ತ್ವರಿತ ಸೇವೆ ದೊರಕುತ್ತದೆ ಎಂದು ಭಾವಿಸಿ ಸಾಲ ಮಾಡಿಯಾದರೂಗ್ರಾಮೀಣ ರೋಗಿಗಳು ಬರುತ್ತಾರೆ. ಈ ಸಂದರ್ಭ ವ್ಯೆದ್ಯರು ಪ್ರಾಮಾಣಿಕವಾಗಿ ಆರೈಕೆ ಮಾಡಬೇಕು ಎಂದರು. ಜನನಿ ಆಸ್ಪತ್ರೆ ಮುಖ್ಯಸ್ಥ ಡಾ.ಪ್ರವೀಣ್ ಮಾತನಾಡಿ, ಅಪೊಲೋ ಆಸ್ಪತ್ರೆಯ ಸ್ಪಂದನೆಯನ್ನು ಕೊಂಡಾಡಿದರು. ತಾಲೂಕುಗಳಿಗೂ ಗುಣಮಟ್ಟದ ವೈದ್ಯಕೀಯ ಸೇವೆ ವಿಸ್ತರಿಸುವಲ್ಲಿ ಜನನಿ ಆಸ್ಪತ್ರೆಗೆ ವ್ಯೆದ್ಯ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರನ್ನೂ ಅಪೊಲೋ ಸಂಸ್ಥೆ ನೀಡುತ್ತಿದೆ. ಈಗಾಗಲೇ ಹುಣಸೂರು, ಮಂಡ್ಯ, ಗೋಣಿಕೊಪ್ಪ, ನಂಜನಗೂಡಿನಲ್ಲಿ ಈ ಸೇವಾಕಾರ್ಯ ಫಲ ನೀಡುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net