ಆಂಧ್ರ ಚುನಾವಣೆಗೆ ಕರ್ನಾಟಕದಿಂದ ಸಾವಿರ ಪೊಲೀಸರು

CTD 000002
Published on


ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ
ಲೋಕಸಭಾ ಮತ್ತು ವಿಧಾನಸಭಾ ಚುನಾವಣೆ ಸಲುವಾಗಿ ಕರ್ನಾಟಕದಿಂದ ಒಂದು ಸಾವಿರ ಪೊಲೀಸರು ಆಂಧ್ರಪ್ರದೇಶಕ್ಕೆ ತೆರಳುತ್ತಿ ದ್ದಾರೆ.
ದೇಶಾದ್ಯಂತ ಮೇ 13ರಂದು ಲೋಕಸಭೆಗೆ 4ನೇ ಹಂತದ ಚುನಾವಣೆ ನಡೆಯುತ್ತಿದ್ದು,ಆಂಧ್ರದಲ್ಲಿ ಲೋಕಸಭೆ ಜತೆ ವಿಧಾನಸಭೆಗೂ ಚುನಾವಣೆ ನಡೆಯುತ್ತಿದೆ. ನಮ್ಮ ರಾಜ್ಯದ ವಿವಿಧ ಜಿಲ್ಲೆಗಳಿಂದ ಪೊಲೀಸರು ಮೇ 10ರಿಂದ 5 ದಿನಗಳ ಕಾಲ ಆಂಧ್ರದಲ್ಲಿ ಕರ್ತವ್ಯ ನಿರ್ವ ಹಿಸಲಿದ್ದಾರೆ.
ಬೆಂಗಳೂರು ಕಮಿಷನರೇಟ್‌ನಿಂದ 400 ಪೊಲೀಸರು ತಿರುಪತಿ ಜಿಲ್ಲೆಗೆ,ತುಮಕೂರಿಂದ 150-ಶ್ರೀ ಸತ್ಯಸಾಯಿ,ಚಿಕ್ಕಬಳ್ಳಾಪುರ-150-ವೈಎಸ್‌ಆರ್‌ಕಡಪ, ಕೋಲಾರದಿಂದ 100 ಅಣ್ಣಮಯ್ಯ,ಚಿತ್ರದುರ್ಗದಿಂದ 100 ಕರ್ನೂಲ್ ಹಾಗೂ ರಾಮನಗರ ಜಿಲ್ಲೆಯಿಂದ 100 ಪೊಲೀಸರು ನಂದ್ಯಾಲ್ ಜಿಲ್ಲೆಗೆ ತೆರಳುತ್ತಿದ್ದಾರೆ.
ಕರ್ನಾಟಕದ 14 ಕ್ಷೇತ್ರಗಳಲ್ಲಿ ಮೇ7ರಂದು ನಡೆಯಲಿರುವ 3ನೇ ಹಂತದ ಮತದಾನಕ್ಕಾಗಿ ಹಲವು ಜಿಲ್ಲೆಗಳಿಗೆ ಚಿತ್ರದುರ್ಗದಿಂದ 19 ಪಿಎಸ್‌ಐ/ಆರ್‌ಎಸ್‌ಐ ಸಹಿತ 764 ಪೊಲೀಸರು ತೆರಳುತ್ತಿದ್ದಾರೆ. ರಾಯಚೂರಿಗೆ 284,ಬಳ್ಳಾರಿಗೆ 225 ಹಾಗೂ ಹಾವೇರಿಗೆ 225 ಪೊಲೀಸರು ತೆರಳುತ್ತಿದ್ದಾರೆ. ಜಿಲ್ಲೆಯ ಡಿಎಆರ್ ಹಾಗೂ ವಿವಿಧ ತಾಲೂಕುಗಳ ಠಾಣೆಗಳಿಂದ ಸಿವಿಲ್ ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ.
ಬಿಸಿಲು ಅಧಿಕವಾಗುತ್ತಿರುವ ಈ ಹೊತ್ತಿನಲ್ಲಿ ಬಂದೋಬಸ್ತ್‌ಗೆ ಯುವ ಪೊಲೀಸರನ್ನೇ ಕಳಿಸಲು ಹಿರಿಯ ಅಧಿಕಾರಿಗಳು ಆದ್ಯತೆ ನೀ ಡುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಚಿತ್ರದುರ್ಗ ಸೇರಿದಂತೆ ರಾಜ್ಯದ ಗೃಹರಕ್ಷಕ ದಳ ಸಿಬ್ಬಂದಿ ಕೂಡ ತೆಲಂಗಾ ಣಕ್ಕೆ ತೆರಳಿದ್ದರು. ಈ ಬಾರಿಯೂ ಲೋಕಸಭೆ ಚುನಾವಣೆ ಬಂದೋಬಸ್ತ್‌ಗೆಂದು ಮೇ 10ರಂದು ಚಿತ್ರದುರ್ಗದಿಂದ 150 ಸೇರಿ ರಾಜ್ಯ ದಿಂದ 2500 ಗೃಹರಕ್ಷಕ ದಳದ ಸಿಬ್ಬಂದಿ ತೆಲಂಗಾಣಕ್ಕೆ ತೆರಳುತ್ತಿದ್ದಾರೆ.
ಬಾಕ್ಸ್…
ರೆಗ್ಯೂಲರ್‌ವರ್ಕ್ ಮೇಲೆ ಪರಿಣಾಮ
ಕಳೆದ ಮೂರ‌್ನಾಲ್ಕು ತಿಂಗಳಿಂದ ತರಬೇತಿ,ವಿಐಪಿ ಬಂದೋಬಸ್ತ್ ಮೊದಲಾದ ಚುನಾವಣಾ ಸಂಬಂಧಿ ಸಿದ್ಧತೆಯಲ್ಲಿ ತೊಡಗಿಕೊಂಡಿ ದ್ದ ಪೊಲೀಸರಿಗೆ ಇನ್ನು ಕೂಡ ಕಾನೂನು ಸುವ್ಯವಸ್ಥೆ ಕೆಲಸಗಳಲ್ಲಿ ತಮ್ಮನ್ನು ಪರಿಪೂರ್ಣವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಮಾತು ಇಲಾಖೆ ವಲಯದಲ್ಲಿದೆ.
ಮೊದಲ ಹಂತದ ಮತದಾನದ ಬಳಿಕ ಚುನಾವಣೆ ಮುಗಿಯಿತು,ಇನ್ನು ದೈನಂದಿನ ಕೆಲಸದಲ್ಲಿ ತೊಡಗಿಸಿಕೊಳ್ಳುವಂತೆ ಇಲಾಖೆ ಹಿರಿ ಯ ಅಧಿಕಾರಿಗಳು ಕೆಳಹಂತದ ಅಧಿಕಾರಿಗಳಿಗೆ ಸೂಚಿಸುತ್ತಿದ್ದಾರೆ.
ಆದರೆ ಬೇರೆಡೆ ಬಂದೋಬಸ್ತ್‌ಗೆ ಮೆನ್‌ಗಳು ಹೋಗುತ್ತಾರೆ.ಮತ ಎಣಿಕೆ,ಫಲಿತಾಂಶ,ವಿಜಯೋತ್ಸವ ಇತ್ಯಾದಿ ಚುನಾವಣೆ ಕಾರ‌್ಯ ಗ ಳು ಸಂಪೂರ್ಣವಾದ ಬಳಿಕವೇ ಪೊಲೀಸರು ಎಂದಿನಂತೆ ದೈನಂದಿನ ಕರ್ತವ್ಯದಲ್ಲಿ ತೊಡಗಲು ಸಾಧ್ಯವೆಂಬ ಅಭಿಪ್ರಾಯವನ್ನು ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net