

ನರಗುಂದ: ಆಂತರಿಕ ಸೌಂದರ್ಯ ಉಳ್ಳ ಮನಸ್ಸಿನಿಂದ ಪೂಜಿಸಿ ಶಿವನ ಪ್ರೀತಿಗೆ ಭಕ್ತರು ಪಾತ್ರರಾಗಬೇಕು ಎಂದು ಮುಂಡಗೋಡ ಈಶ್ವರಿ ವಿದ್ಯಾಲಯದ ಸಂಚಾಲಕಿ ಗಂಗಾಂಬಿಕಾ ತಿಳಿಸಿದರು.
ಪಟ್ಟಣದ ಪುರಸಭೆ ಆವರಣದಲ್ಲಿ ಈಶ್ವರಿ ವಿದ್ಯಾಲಯದಿಂದ ಮಂಗಳವಾರ ಹಮ್ಮಿಕೊಂಡಿದ್ದ 84ನೇ ತ್ರಿಮೂರ್ತಿ ಶಿವ ಜಯಂತಿಯಲ್ಲಿ ಜೀವನ ದರ್ಶನ ವಿಷಯದ ಕುರಿತು ಮಾತನಾಡಿದರು. ಮನುಷ್ಯ ತನ್ನ ಅರಿವನ್ನು ಮರೆತು ವಿಚಿತ್ರ ಆಕಾರದಲ್ಲಿ ಬದುಕುತ್ತಿದ್ದಾನೆ. ಸ್ವಾರ್ಥಕ್ಕಾಗಿ ಪರಿಸರ ನಾಶ ಮಾಡುತ್ತಿದ್ದಾನೆ. ಇದರಿಂದ ಸಾಮಾಜಿಕ ಸ್ಥಿತಿಗತಿಗಳ ಮೇಲೆ ಸಾಕಷ್ಟು ದುಷ್ಪರಿಣಾಮ ಉಂಟಾಗುತ್ತಿದೆ. ಕಾಲಕಾಲಕ್ಕೆ ಮಳೆಯಾಗದ ಕಾರಣ ರೈತ ಸಂಕುಲ ಸಂದಿಗ್ಧ ಸ್ಥಿತಿಯಲ್ಲಿ ಬದುಕುವಂತಾಗಿದೆ. ಆದ್ದರಿಂದ ಪ್ರತಿಯೊಬ್ಬ ಮನುಷ್ಯ ಅಧ್ಯಾತ್ಮದಲ್ಲಿ ಒಲವು ಹೊಂದಬೇಕು ಎಂದರು.
ಶ್ರೀವಾಸವಿ ಹಾಗೂ ಉಡಚಾ ಪರಮೇಶ್ವರಿ ಮಹಿಳಾ ಭಜನಾ ಮಂಡಳದವರಿಂದ ಭಜನೆ ನಡೆಯಿತು. ಸುಮಂಗಲಾ ವಾಳದ, ಸುಜಾತಾ ಇಂಗಳಳ್ಳಿ, ರತ್ನಾ ಗುಡಿಸಾಗರ, ವಿದ್ಯಾ ಇಂಗಳಳ್ಳಿ, ಶ್ವೇತಾ ಗುಡಿಸಾಗರ, ಸಾವಿತ್ರಿ ಬಶೆಟ್ಟಿ, ಸುಧಾ ಮುಧೋಳೆ, ನಂದಾ ಗಡಾದ, ನಂದಾ ಕೋರಿ, ಶಿವಲೀಲಾ ಕೊಳ್ಳಿಯವರ, ರತ್ನಾ ವಾಳದ, ವಿ.ಎನ್.ಕೊಳ್ಳಿಯವರ, ವಿ.ಎಸ್.ವೀರನಗೌಡ್ರ, ಅಡಿವೆಪ್ಪ ಬಾಳಿಕಾಯಿ, ಬಿ.ಎಸ್. ಸವದಿ, ಎಂ.ಜಿ. ಕೋರಿ, ಪ್ರಭು ಯಲಿ ಉಪಸ್ಥಿತರಿದ್ದರು. ಅರವಿಂದ ಮೇಗೂರ, ಡಿ.ಬಿ. ದೊಡಮನಿ ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಜರುಗಿತು. ಪ್ರಭಕ್ಕ ನಿರ್ವಹಿಸಿದರು.
EndFragment