ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ 18ಕ್ಕೆ

Aanjaneyaswamy
Published on

ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಕಲ್ಲವ್ವನಾಗತಿಹಳ್ಳಿಯ ಆಂಜನೇಯ ಸ್ವಾಮಿಯ ಬ್ರಹ್ಮರಥೋತ್ಸವ ಏ. 18ರಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಲಿದೆ.

ಸ್ವಾಮಿಯ ಜಾತ್ರಾ ಮಹೋತ್ಸವದ ಅಂಗವಾಗಿ 14ರಂದು ಮದುವಣಗಿತ್ತಿ ಶಾಸ್ತ್ರ, 15ರಂದು ಊರ ಹಸೆ, 17ರಂದು ಹಿಟ್ಟಿನ ಹಸೆ ಸೇವೆ, 19ರಂದು ಬೆಳಗ್ಗೆ 9ಕ್ಕೆ ಸ್ವಾಮಿಗೆ ದೊಡ್ಡ ಎಡೆ, ರಾತ್ರಿ 9ಕ್ಕೆ ಓಕಳಿ ಸೇವೆ ನಡೆಯಲಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net