ಆಂಜನೇಯಸ್ವಾಮಿ ದೊಡ್ಡ ರಥೋತ್ಸವ 21ಕ್ಕೆ

Aanjaneya Swamy
Published on

ಚಿತ್ರದುರ್ಗ: ತಾಲೂಕಿನ ದೊಡ್ಡ ಸಿದ್ಧವ್ವನಹಳ್ಳಿಯ ಆಂಜನೇಯ ಸ್ವಾಮಿಯ ಜಾತ್ರಾ ಮಹೋತ್ಸವ ಗುರುವಾರ ರಥದ ಕಳಸಾರೋಹಣದೊಂದಿಗೆ ಆರಂಭವಾಗಿದ್ದು, ಏ. 22ರವರೆಗೂ ನಡೆಯಲಿದೆ.

20ರಂದು ಚಿಕ್ಕರಥೋತ್ಸವ ಜರುಗಲಿದ್ದು, ಎಣ್ಣೆಗೆರೆ ಗ್ರಾಮಸ್ಥರಿಂದ ಎಡೆ ಪೂಜೆ ನೆರವೇರಲಿದೆ. ಅಂದು ಬೆಳಗ್ಗೆ 10ಕ್ಕೆ ಡಿ.ಎಸ್.ಹಳ್ಳಿಯಲ್ಲಿ ದಾಸಪ್ಪನ ಉತ್ಸವ ನಂತರ ಇಂಗಳದಾಳ್ ಗ್ರಾಮಕ್ಕೆ ಹೊರಡುವುದು. ಮಧ್ಯಾಹ್ನ 1ಕ್ಕೆ ಇದೇ ಗ್ರಾಮದಲ್ಲಿ ಮುಳ್ಳು ಪಲ್ಲಕ್ಕಿ ಪವಾಡಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾಗಲಿದ್ದಾರೆ.

ಸಂಜೆ 4ಕ್ಕೆ ಡಿ.ಎಸ್.ಹಳ್ಳಿಯ ತೋಪರದಾಸಪ್ಪನ ಗುಡಿ ಮುಂದೆ ತೋಪರಮಾಳಿಗೆ ಗ್ರಾಮಸ್ಥರಿಂದ ಮಣೆವು ಪೂಜೆ. 5ಕ್ಕೆ ದೊಡ್ಡಸಿದ್ಧವ್ವನಹಳ್ಳಿಯಲ್ಲಿ ಮುಳ್ಳು ಪಲ್ಲಕ್ಕಿ ಪವಾಡ, ರಾತ್ರಿ 8ಕ್ಕೆ ದೊಡ್ಡ ಎಡೆ ಪೂಜಾ ಕೈಂಕರ್ಯ ನಡೆಯಲಿದೆ.

21ರಂದು ಮಧ್ಯಾಹ್ನ 12.30ಕ್ಕೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸ್ವಾಮಿಯ ದೊಡ್ಡ ರಥೋತ್ಸವ ಜರುಗಲಿದೆ. 22ರಂದು ಸಂಜೆ 5ಕ್ಕೆ ಮಂಗಳಸ್ನಾನ, ನಂತರ ಹೂವಿನ ಪಲ್ಲಕ್ಕಿ ಮಹೋತ್ಸವ ನಡೆಯಲಿದೆ ಎಂದು ಜಾತ್ರಾ ಸಮಿತಿ, ಗ್ರಾಮಸ್ಥರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net