ಆಂಜನೇಯ ಸ್ವಾಮಿಗೆ ಶ್ರಾವಣದ ಪೂಜೆ

Barageri Aanjaneya Swamy
Published on

ಚಿತ್ರದುರ್ಗ: ನಗರದ ಬಹುತೇಕ ಆಂಜನೇಯ ಸ್ವಾಮಿ, ವೆಂಕಟೇಶ್ವರ ಸ್ವಾಮಿ ದೇಗುಲಗಳಲ್ಲಿ ಶ್ರಾವಣ ಮಾಸದ ಅಂಗವಾಗಿ ಶನಿವಾರ ವಿಶೇಷ ಪೂಜೆಯೊಂದಿಗೆ ಸ್ವಾಮಿಯನ್ನು ಭಕ್ತಿಯಿಂದ ಆರಾಧಿಸಲಾಯಿತು.

ಸ್ವಾಮಿಯ ಮೂರ್ತಿಗೆ ಮುಂಜಾನೆ ಅಭಿಷೇಕ, ಅಷ್ಟೋತ್ತರ ಶತನಾಮಾವಳಿ, ಸಹಸ್ರ ನಾಮಾವಳಿ ಸೇರಿ ಶ್ರದ್ಧಾ-ಭಕ್ತಿಯಿಂದ ಪೂಜಿಸಲಾಯಿತು. ಸಾವಿರಾರು ಭಕ್ತರು ಭೇಟಿ ನೀಡಿ ದರ್ಶನ ಪಡೆದರು.

ಬರಗೇರಿ ಆಂಜನೇಯ, ಕಣಿವೆ ಆಂಜನೇಯ, ತಮಟಕಲ್ಲು ಆಂಜನೇಯ, ವೀರಾಂಜನೇಯ, ಕೋಟೆ ಆಂಜನೇಯ, ಕ್ರೀಡಾಂಗಣ ರಸ್ತೆಯ ಆಂಜನೇಯ, ರಕ್ಷಾ ಆಂಜನೇಯ, ತುರುವನೂರು ರಸ್ತೆಯ ವೆಂಕಟರಮಣ ಸ್ವಾಮಿ, ಆನೆಬಾಗಿಲು ವೆಂಕಟೇಶ್ವರ ಸ್ವಾಮಿ, ಉಗ್ರನರಸಿಂಹಸ್ವಾಮಿ, ಲಕ್ಷ್ಮೀನರಸಿಂಹ ಸ್ವಾಮಿ ದೇಗುಲಗಳಲ್ಲೂ ಪುಷ್ಪಾಲಂಕಾರ ಸೇರಿ ವಿಶೇಷಾಲಂಕಾರ ನೆರವೇರಿದವು. ಮಾಸದ ಮುಂಬರುವ ಪ್ರತಿ ಶನಿವಾರವೂ ಪೂಜೆಗೆ ಭಕ್ತರ ಸಂಖ್ಯೆ ಹೆಚ್ಚುವ ನಿರೀಕ್ಷೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net