

ಕಕ್ಕೇರಿ: ಖಾನಾಪುರ ತಾಲೂಕಿನ ಕೇರವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುರಪುರ&ಕೇರವಾಡ ಗ್ರಾಮದಿಂದ ಆಂಜನೇಯ ನಗರ ರಸ್ತೆ ಸಂಪೂರ್ಣ ಹದಗೆಟ್ಟ ಹಿನ್ನೆಲೆಯಲ್ಲಿ ಶಾಸಕ ವಿಠ್ಠಲ ಹಲಗೇಕರ್ ಈಚೆಗೆ ಭೇಟಿ ನೀಡಿ ಪರಿಶೀಲಿಸಿದರು.
ಶಾಸಕ ವಿಠ್ಠಲ ಹಲಗೇಕರ್ ಮಾತನಾಡಿ, ತಾತ್ಕಾಲಿಕವಾಗಿ ರಸ್ತೆ ರಿಪೇರಿ ಮಾಡಿಸಲು ತಣ ಎರಡು ಲ ರೂ.ಅನುದಾನ ಮಂಜೂರು ಮಾಡಿಸಿ ಕೆಲಸ ಪ್ರಾರಂಭಿಸಲಾಗುವುದು. ಶ್ರೀ ರಸ್ತೆ ನಿರ್ಮಾಣ ಮಾಡಿಸುವುದಾಗಿ ಭರವಸೆ ಕೊಟ್ಟರು. ಆಂಜನೇಯ ನಗರದಲ್ಲಿ 1&5ನೇ ತರಗತಿಗೆ ಹೊಸದಾಗಿ ಶಾಲೆ ಆರಂಭಿಸಲಾಗುವುದು ಎಂದು ಭರವಸೆ ನೀಡಿದ ಅವರು, ತಾತ್ಕಾಲಿಕವಾಗಿ ಗ್ರಾಮದ ಬಾಡಿಗೆ ಕೊಠಡಿಯಲ್ಲಿ ಶಾಲೆ ಪ್ರಾರಂಭ ಮಾಡಲು ಕ್ಷೇತ್ರ ಶಿಣಾಧಿಕಾರಿ ರಾಜಶ್ರೀ ಕುಡಚಿ ಅವರಿಗೆ ಸೂಚಿಸಿದರು.
ಮೂಲಸೌಕರ್ಯ ಕಲ್ಪಿಸಬೇಕೆಂದು ಶಾಸಕರಿಗೆ ಆಂಜನೇಯ ನಗರ ಹಾಗೂ ಸುರಪುರ&ಕೇರವಾಡ ಗ್ರಾಮಸ್ಥರು, ವಿದ್ಯಾರ್ಥಿಗಳು ಮನವಿ ಮಾಡಿದರು. ಬಿಜೆಪಿ ಜಿಲ್ಲಾ ಉಪಾಧ್ಯ ಪ್ರಮೋದ ಕೋಚೇರಿ, ಸುನೀಲ ಮಡ್ಡಿಮನಿ, ಸತ್ಯಗೌಡ ಪಾಟೀಲ, ರಾಜಶೇಖರ ಹಿಡಕಲಕರ,
ತಿಪ್ಪಣ್ಣ ಶಾಬಂದ್ರಿ, ಬಾಬುಗೌಡ ಪಾಟೀಲ, ಮಂಜು ಅಂಕಲಗಿ, ಸಂತೋಷ ಹಡಪದ, ಸಿದ್ದು ಪಾಟೀಲ, ವಿಠ್ಠಲ ಹಿಂಡಲ್ಕರ ಇತರರಿದ್ದರು.