ಆಂಗ್ಲ ವ್ಯಾಮೋಹ ಬಿಟ್ಟು ಕನ್ನಡ ಭಾಷೆ ಕಲಿಯಿರಿ

Bhasha din
Published on

ಬೀದರ್: ಮಾತೃ ಭೂಮಿಯಂತೆ ಮಾತೃಭಾಷೆ ಸಹ ಶ್ರೇಷ್ಠ. ಮಕ್ಕಳ ಸಮಗ್ರ ಅಭಿವೃದ್ಧಿಗಾಗಿ ಮಾತೃ ಭಾಷೆ ಕನ್ನಡದಲ್ಲಿ ಶಿಕ್ಷಣ ನೀಡಬೇಕೆಂದು ಹಿರಿಯ ಸಾಹಿತಿ, ದೇಶಪಾಂಡೆ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಜಿ. ದೇಶಪಾಂಡೆ ಹೇಳಿದರು.

ಕರ್ನಾಟಕ ಜಾಗೃತಿ ವೇದಿಕೆ ಜಿಲ್ಲಾ ಘಟಕ, ಬೀದರ್ ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆ, ನ್ಯೂ ಮದರ್ ಥೆರೆಸಾ ಅಭಿವೃದ್ಧಿ ಸಂಸ್ಥೆ ಹಾಗೂ ಡಾ.ಕೇರ್ ಚಾರಿಟೇಬಲ್ ಟ್ರಸ್ಟ್ ನಿಂದ ನಗರದಲ್ಲಿ ಏರ್ಪಡಿಸಿದ ಅಂತಾರಾಷ್ಟ್ರೀಯ ಮಾತೃ ಭಾಷಾ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ, ಆಂಗ್ಲ ವ್ಯಾಮೋಹ ಬಿಟ್ಟು ಕನ್ನಡಕ್ಕೆ ಆದ್ಯತೆ ಕೊಡುವಂತೆ ಸಲಹೆ ನೀಡಿದರು.

ಮಕ್ಕಳ ತಜ್ಞ ಡಾ. ಸಿ.ಆನಂದರಾವ ಮಾತನಾಡಿ, ಮಾತೃ ಭಾಷೆ ಮೂಲಕ ಮಗು ಸ್ಪಷ್ಟವಾಗಿ ತನ್ನ ವಿಚಾರಗಳು ಹಂಚಿಕೊಳ್ಳಬಹುದು. ಪ್ರತಿಯೊಬ್ಬರೂ ಕನ್ನಡಕ್ಕೆ ತಾಯಿ ಸ್ಥಾನ ನೀಡಬೇಕು ಎಂದರು.

ಅಧ್ಯಕ್ಷತೆ ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆ ಅಧ್ಯಕ್ಷ ಅರವಿಂದ ಕುಲಕರ್ಣಿ ವಹಿಸಿದ್ದರು. ಸಂಜೀವಕುಮಾರ ಸ್ವಾಮಿ, ಜೈಕುಮಾರ ಯೇಸುದಾಸ, ಕಾಮಶೆಟ್ಟಿ ಚಿಕಬಸ್ಸೆ, ಶ್ರೀದೇವಿ ಹೂಗಾರ, ಡಾ.ಜಗದೇವಿ ತಿಬಶೆಟ್ಟಿ ಮಾತನಾಡಿದರು. ವೀರಭದ್ರಪ್ಪ ಉಪ್ಪಿನ್, ಸಂಗಮೇಶ ಜ್ಯಾಂತೆ, ಅನಂತ ಕುಲಕರ್ಣಿ, ಓಂಕಾರ ಪಾಟೀಲ್, ಜೈಪ್ರಕಾಶ, ಧನರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net